ಸಂಸದ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಗೋಡಂಬಿ ಉದ್ಯೋಗಿಗಳ ನಿಯೋಗ ನವದೆಹಲಿಯಲ್ಲಿ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿತು. ಬೋಳ ರಾಹುಲ್ ಕಾಮತ್, ಕಿರಣಕುಮಾರ್ ಕೊಡ್ಗಿ, ಎಂ.ರಾಮಕೃಷ್ಣನ್, ಪ್ರಕಾಶ್ ಕಲ್ಬಾವಿ, ತುಕಾರಾಮ್ ಪ್ರಭು, ಉಪೇಂದ್ರ ಕೆ. ಇತರರಿದ್ದರು.
Published on:
Copied
Follow Us
* ಸಂಸದ ಕೋಟ ಶ್ರೀನಿವಾಸ ಪೂಜಾರಿ ಒತ್ತಾಯ
* ನಿಯೋಗದೊಂದಿಗೆ ಪಿಯೂಷ್ ಗೋಯಲ್ಗೆ ಮನವಿ
ಉಡುಪಿ: ದೇಶದಲ್ಲಿ ಗೋಡಂಬಿ ಉದ್ಯಮದ ಹಿತಾಸಕ್ತಿ ಕಾಪಾಡಿದರೆ ಗೇರುಬೀಜದ ಕಾರ್ಖಾನೆಯಲ್ಲಿ ದುಡಿಯುತ್ತಿರುವ ಲಕ್ಷಾಂತರ ಕಾರ್ಮಿಕರಿಗೆ ಬದುಕು ಕಟ್ಟಿಕೊಡಲು ಸಾಧ್ಯವಿದೆ. ಅಲ್ಲದೆ, ತೋಟಗಾರಿಕಾ ಕ್ಷೇತ್ರ ಆರ್ಥಿಕವಾಗಿ ಇನ್ನಷ್ಟು ಅಭಿವೃದ್ಧಿಗೊಳ್ಳಲಿದೆ. ಹೀಗಾಗಿ ಈ ಉದ್ಯಮಕ್ಕೆ ಎದುರಾಗಿರುವ ತೊಡಕು, ಸಮಸ್ಯೆ ನಿವಾರಿಸಿ ರಕ್ಷಿಸಬೇಕು ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ಅಖಿಲ ಭಾರತ ಗೋಡಂಬಿ ಉದ್ಯಮ ಸಂಘದ ಅಧ್ಯಕ್ಷ ಬೋಳ ರಾಹುಲ್ ಕಾಮತ್ ಮತ್ತು ಕುಂದಾಪುರ ಶಾಸಕ ಕಿರಣಕುಮಾರ್ ಕೊಡ್ಗಿ ಇತರರಿದ್ದ ನಿಯೋಗದೊಂದಿಗೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರನ್ನು ನವದೆಹಲಿಯ ಕಚೇರಿಯಲ್ಲಿ ಗುರುವಾರ (ಮೇ7) ಭೇಟಿಯಾಗಿ, ಗೋಡಂಬಿ ಉದ್ಯಮ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ ಮನವಿ ಅರ್ಪಿಸಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಚಿವ ಪಿಯೂಷ್ ಗೋಯಲ್ ಭೇಟಿಯಾಗಿ ಮನವಿ ಅರ್ಪಿಸಿದರು.
ಉದ್ಯಮಕ್ಕೆ ತೊಡಕು
ಭಾರತದ ಮಾರುಕಟ್ಟೆಗೆ ಹೊರದೇಶದ ಗೋಡಂಬಿ ಆಮದಿನ ಹೆಸರಿನಲ್ಲಿ ಸುಂಕ ಕಡಿತಗೊಳಿಸುವಿಕೆ, ನಿಯಮ ರಹಿತವಾಗಿ ಗೋಡಂಬಿ ಸಾಗಾಟ ಮಾಡಲಾಗುತ್ತಿದೆ. ಭಾರತವೂ ಸೇರಿದಂತೆ ಅನ್ಯ ರಾಷ್ಟ್ರಗಳಲ್ಲಿ ತಿರಸ್ಕರಿಸಲ್ಪಟ್ಟ ಕಳಪೆ ಗುಣಮಟ್ಟದ ಹಾಗೂ ನುಚ್ಚು ಗೋಡಂಬಿಗಳನ್ನು ಪಶು ಆಹಾರ ಉತ್ಪಾದಿಸುವಿಕೆಯ ನೆಪದಲ್ಲಿ ಸುಂಕ ವಿನಾಯಿತಿಯೊಂದಿಗೆ ಖರೀದಿಸಲಾಗುತ್ತಿದೆ. ಅದನ್ನು ಮಾರುಕಟ್ಟೆಯಲ್ಲಿ ಉತ್ಪಾದಿತ ಗೋಡಂಬಿಗೆ ಸಮನಾಗಿ ಮಾರಾಟ ಮಾಡುವ ಮೂಲಕ ನೈಜ ಉದ್ಯಮಕ್ಕೆ ಆಗುತ್ತಿರುವ ತೊಡಕುಗಳ ಕುರಿತು ಕೇಂದ್ರ ಸಚಿವರಿಗೆ ಸಂಸದ ಕೋಟ ಮನವರಿಕೆ ಮಾಡಿದರು.
ಅನಗತ್ಯ ಗೊಂದಲ
ದೇಶದ ಕೆಲವೆಡೆ ನೈಜ ಗೋಡಂಬಿಯನ್ನು ಹುರಿದ ಗೋಡಂಬಿ ಎಂದು ಘೋಷಿಸಿ, ದರದ ವ್ಯತ್ಯಯ ಮತ್ತು ಸಂಶೋಧನಾ ಸಂಸ್ಥೆಗಳ ತಪಾಸಣೆಯಿಂದ ಉದ್ಯಮದಲ್ಲಿ ಅನಗತ್ಯ ಗೊಂದಲ ಉಂಟಾಗುತ್ತಿದೆ. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಗೋಡಂಬಿ ಉದ್ಯಮವನ್ನು ಉಳಿಸಿ, ಬೆಳೆಸಲು ಸಹಕರಿಸಬೇಕು ಎಂದು ಗೋಡಂಬಿ ಉದ್ಯಮಿಗಳು ವಿನಂತಿಸಿದರು.
ಶಾಸಕ ಕಿರಣಕುಮಾರ್ ಕೊಡ್ಗಿ ಮಾತನಾಡಿ, ಗೇರುಬೀಜ ಉದ್ಯಮ ಉಳಿದು ಬೆಳೆಯಲು ಸಹಾಯ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ವಾಣಿಜ್ಯ ಕೈಗಾರಿಕಾ ಮಂತ್ರಿಗಳಿಗೆ ಕೃತಜ್ಞತೆ ತಿಳಿಸಿದರು.
ಸಭೆಯಲ್ಲಿ ಅಖಿಲ ಭಾರತ ಗೋಡಂಬಿ ಉದ್ಯಮ ಸಂಘದ ಕಾರ್ಯದರ್ಶಿ ಎಂ.ರಾಮಕೃಷ್ಣನ್, ಪ್ರಕಾಶ್ ಕಲ್ಬಾವಿ, ತುಕಾರಾಮ್ ಪ್ರಭು, ಉಪೇಂದ್ರ ಕೆ. ಮತ್ತು ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ನಿತಿನ್ ಯಾದವ್, ಆರ್ಥಿಕ ಸಲಹೆಗಾರ್ತಿ ಪ್ರಿಯಾ ನಾಯರ್, ಹೆಚ್ಚುವರಿ ಡಿಜಿಎಫ್ಟಿ ರಾಕೇಶ್ ಕುಮಾರ್ ಇತರರಿದ್ದರು.
ಉದ್ಯಮಕ್ಕೆ ಆಗುತ್ತಿರುವ ತೊಡಕುಗಳ ಕುರಿತು ಕೇಂದ್ರ ಸಚಿವರಿಗೆ ಸಂಸದ ಕೋಟ ಮನವರಿಕೆ ಮಾಡಿದರು.
ಅಕ್ರಮ ತಡೆಗೆ ಕಟ್ಟುನಿಟ್ಟಿನ ಮಾರ್ಗಸೂಚಿ
ಗೋಡಂಬಿ ಉದ್ಯಮಕ್ಕೆ ಸಂಬಂಧಿಸಿ ಸುದೀರ್ಘ ಚರ್ಚೆಯ ನಂತರ ಮಾತನಾಡಿದ ಸಚಿವ ಪಿಯೂಷ್ ಗೋಯಲ್, ಇನ್ನುಮುಂದೆ ಅಕ್ರಮವಾಗಿ ಗೋಡಂಬಿ ಆಮದು ಆಗದಂತೆ ಕಟ್ಟುನಿಟ್ಟಾಗಿ ಮಾರ್ಗಸೂಚಿ ರಚಿಸಬೇಕು. ಪಶು ಆಹಾರಕ್ಕೆ ಬಳಸುವ ನೆಪದಲ್ಲಿ ಸುಂಕ ರಹಿತ ಗೋಡಂಬಿ ಆಮದು ನಿಲ್ಲಿಸಬೇಕು. ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯ ಮೂಲಕವೇ ಗುಣಮಟ್ಟ ಪರಿಶೀಲನೆ ಮಾಡಬೇಕು. ಕಾನೂನು ಚೌಕಟ್ಟಿನಲ್ಲಿ ದೇಸೀಯ ಮಾನದಂಡದಡಿ ಮಾತ್ರ ಗೋಡಂಬಿ ಆಮದಿಗೆ ಅವಕಾಶ ನೀಡಬೇಕು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.