ಕಾರ್ಕಳದ ಕಲ್ಲು ಕ್ವಾರಿಗಳ ಸಮಸ್ಯೆ ಹೊಸದೇನಲ್ಲ. ಆದರೂ ಜನನಿಬಿಡ ಪ್ರದೇಶಗಳಲ್ಲಿರುವ ಕ್ವಾರಿಗಳಿಗೆ ಆದ್ಯತೆ ನೀಡಿ ತಕ್ಷಣ ಕ್ರಮ ಕೈಗೊಳ್ಳಬೇಕಿದೆ. ನಂದಳಿಕೆ, ಸೂಡ ಪಡುಬೆಟ್ಟು, ಕಲ್ಯಾ, ಪಳ್ಳಿ, ನಿಟ್ಟೆ ಪರಪ್ಪಾಡಿ, ಬೆಳ್ಮಣ್, ಜಾರ್ಕಳ, ಅಯ್ಯಪ್ಪ ನಗರ ಸೇರಿದಂತೆ ತಾಲೂಕಿನಾದ್ಯಂತ ನೂರಾರು ಕಲ್ಲು ಕ್ವಾರಿಗಳಿವೆ. ಈ ಪೈಕಿ ಬಹುತೇಕ ಕಲ್ಲು ಕ್ವಾರೆಗಳಲ್ಲಿ ಮಳೆಗಾಲದಲ್ಲಿ ನೀರು ನಿಂತು ಕೆರೆಯಾಗುತ್ತವೆ. ಮತ್ತೊಂದೆಡೆ ಮುಂಡ್ಕೂರು, ಬೋಳ, ನಾನಾ ಭಾಗದಲ್ಲಿ ಕೆಂಪು ಕಲ್ಲು ಕ್ವಾರಿಗಳಲ್ಲಿಯೂ ನೀರು ನಿಂತು ಅಪಾಯಕಾರಿ ಮಟ್ಟ ತಲುಪುತ್ತವೆ. ಆದರೆ ಬಹುತೇಕ ಸ್ಥಳೀಯ ಗ್ರಾಪಂ ಆಡಳಿತ ಯಾವುದೇ ಕ್ರಮ ಕೈಗೊಂಡಿರುವಂತಿಲ್ಲ.