ಸಭಾ ಕಾರ್ಯಕ್ರಮದ ಬಳಿಕ ‘ಕೂಡಿ ಆಡೋಣ‘ ಎನ್ನುವ ಶೀರ್ಷಿಕೆಯಡಿಯಲ್ಲಿ ಅರಂಬೂರು ವಲಯದ ಗೌಡ ಸಮುದಾಯದವರಿಗೆ ಗದ್ದೆಯಲ್ಲಿ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳನ್ನು ಹುಕ್ರಪ್ಪ ಗೌಡರು ತೆಂಗಿನಕಾಯಿ ಒಡೆದು ಉದ್ಘಾಟಿಸಿದರು. ನಿಧಿ ಶೋಧ, ಮಡಕೆ ಒಡೆಯುವುದು, ಕೆಸರುಗದ್ದೆ ಓಟ, ನಿಂಬೆಹಣ್ಣು ಓಟ, ಬಲೂನು ಒಡೆಯುವುದು, ಹಗ್ಗ ಜಗ್ಗಾಟ ನಡೆದವು. ದಂಪತಿಗಳಿಗೆ ಹಮ್ಮಿಕೊಂಡಿದ್ದ ಹಾಳೆ ಎಳೆಯುವ ಸ್ಪರ್ಧೆ ಗಮನ ಸೆಳೆಯಿತು.