ಉತ್ತಮ ಸಮಾಜಕ್ಕೆ ಸಂಸ್ಕಾರಯುತ ಶಿಕ್ಷಣ ಅಡಿಪಾಯ

 ಪ್ರೇರಣಾ ಶಾಲೆಯ ನೂತನ ಕೊಠಡಿಯನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು. ಗೀತಾ ವಿಜಯ ಕಾಮತ್, ಎಂ.ಶಾಂತಾರಾಮ ಕುಡ್ವ,  ರಾಜೇಶ್ ಎಂ. ಬಂಗೇರ ಮತ್ತಿತರರಿದ್ದರು.
ಪ್ರೇರಣಾ ಶಾಲೆಯ ನೂತನ ಕೊಠಡಿಯನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು. ಗೀತಾ ವಿಜಯ ಕಾಮತ್, ಎಂ.ಶಾಂತಾರಾಮ ಕುಡ್ವ, ರಾಜೇಶ್ ಎಂ. ಬಂಗೇರ ಮತ್ತಿತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಸಂಸ್ಕಾರಯುತ ಶಿಕ್ಷಣ ಉತ್ತಮ ಸಮಾಜ ನಿರ್ಮಾಣಕ್ಕೆ ಅಡಿಪಾಯ. ಸನಾತನ ಹಿಂದೂ ಗುರುಕುಲ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಂಡಿರುವ ಪ್ರೇರಣಾ ಶಾಲೆಗೆ ಗೀತಾ ವಿಜಯ ಕಾಮತ್ ನೀಡಿರುವ ಕೊಡುಗೆ ಇತರರಿಗೂ ಮಾದರಿಯಾಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಕಡಲಕೆರೆಯ ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ದಿ.ಕೆ.ವಿಜಯ ಕಾಮತ್ ಸ್ಮರಣಾರ್ಥ ಗೀತಾ ವಿಜಯ ಕಾಮತ್ ನಿರ್ಮಿಸಿ ಕೊಡುಗೆಯಾಗಿ ನೀಡಿದ ನೂತನ ಕೊಠಡಿ ಉದ್ಘಾಟಿಸಿ ಮಾತನಾಡಿದರು.
ಸಂಚಾಲಕ ಎಂ.ಶಾಂತಾರಾಮ ಕುಡ್ವ ಮಾತನಾಡಿ, ಸತ್ಕಾರ್ಯ ಮಾಡುವವರನ್ನು ಗೌರವಿಸಬೇಕೆಂಬುದು ಶಾಸ್ತ್ರದ ಸಂದೇಶವಾಗಿದ್ದು, ಗೀತಾ ವಿಜಯ ಕಾಮತ್ ಅವರ ಸೇವಾ ಮನೋಭಾವ ಪ್ರೇರಣಾದಾಯಕ ಎಂದರು.
ಗೀತಾ ವಿಜಯ ಕಾಮತ್ ಅವರನ್ನು ಗೌರವಿಸಲಾಯಿತು. ಶ್ರೀ ವೆಂಕಟರಮಣ ದೇವಸ್ಥಾನ ಆಡಳಿತ ಮೊಕ್ತೇಸರ ಜಿ.ಉಮೇಶ್ ಪೈ, ಪಡುಮಾರ್ನಾಡು ಗ್ರಾಪಂ ಮಾಜಿ ಅಧ್ಯಕ್ಷ ದಯಾನಂದ ಪೈ, ಆರ್‌ಎಸ್‌ಎಸ್ ಸ್ವಯಂಸೇವಕ ಚಂದ್ರಹಾಸ ಆಚಾರ್ ಉಪಸ್ಥಿತರಿದ್ದರು. ವಿದ್ಯಾಸಂಸ್ಥೆಯ ಅಧ್ಯಕ್ಷ ರಾಜೇಶ್ ಎಂ.ಬಂಗೇರ ಸ್ವಾಗತಿಸಿದರು. ಹರ್ಷಿತಾ ಕಾರ್ಯಕ್ರಮ ನಿರ್ವಹಿಸಿದರು. ಶಶಿಕಲಾ ವಂದಿಸಿದರು. ಮುಖ್ಯ ಶಿಕ್ಷಕಿ ವತ್ಸಲಾ ರಾಜೇಶ್, ಟ್ರಸ್ಟಿಗಳಾದ ಮಂಜುನಾಥ ಶೆಟ್ಟಿ, ಎಸ್.ಎನ್.ಬೋರ್ಕರ್ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net