ಸಂಸ್ಕಾರಭರಿತ ಶಿಕ್ಷಣದಿಂದ ರಾಷ್ಟ್ರಸೇವೆ ಮನೋಭಾವ

ಪಾದುಕೆಗಳಿಗೆ ಪೂಜೆ ನೆರವೇರಿಸಿದ ಶುಭಲತಾ-ಸತೀಶ್ ಕುಮಾರ್ ಜೈನ್.
ಪಾದುಕೆಗಳಿಗೆ ಪೂಜೆ ನೆರವೇರಿಸಿದ ಶುಭಲತಾ-ಸತೀಶ್ ಕುಮಾರ್ ಜೈನ್.
Published on
ಬೆಳ್ತಂಗಡಿ: ಗುರುವಾಯನಕೆರೆ ಎಕ್ಸೆಲ್ ಪದವಿಪೂರ್ವ ಕಾಲೇಜಿಗೆ ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಭೇಟಿ ನೀಡಿದರು.
ಅರಮಲೆಬೆಟ್ಟ ಕಾಲೇಜು ಆವರಣದಲ್ಲಿ ಆಶೀರ್ವಚನ ನೀಡಿ, ಗುಣಮಟ್ಟದ ಹಾಗೂ ಸಂಸ್ಕಾರಭರಿತ ಶಿಕ್ಷಣದಿಂದ ರಾಷ್ಟ್ರಸೇವೆಯ ಮನೋಭಾವ ಮಕ್ಕಳಲ್ಲಿ ಮೂಡುತ್ತದೆ. ಅಂತಹ ಶಿಕ್ಷಣ ಎಕ್ಸೆಲ್ ವಿದ್ಯಾಸಂಸ್ಥೆಗಳಲ್ಲಿವೆ. ರಾಷ್ಟ್ರದ ಭವಿಷ್ಯ ನಿರ್ಮಿಸುವ ಎಕ್ಸೆಲ್‌ನಂತಹ ಸಂಸ್ಥೆಗಳ ಜತೆ ಶ್ರೀ ಸಂಸ್ಥಾನ ಯಾವತ್ತೂ ಜತೆಗಿರುತ್ತದೆ ಎಂದರು.
ಎಕ್ಸೆಲ್ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರ ಪಾಲಕರಾದ ಶುಭಲತಾ-ಸತೀಶ್ ಕುಮಾರ್ ಜೈನ್ ಸ್ವಾಮೀಜಿಗಳ ಪಾದುಕೆಗಳಿಗೆ ಪೂಜೆ ನೆರವೇರಿಸಿದರು. ಸುಮಂತ್ ಕುಮಾರ್ ಜೈನ್ ಗೌರವಾರ್ಪಣೆ ಸಲ್ಲಿಸಿ, ಅನುಗ್ರಹ ಮಂತ್ರಾಕ್ಷತೆ ಪಡೆದರು.
ಅರಮಲೆಬೆಟ್ಟ ಕ್ಯಾಂಪಸ್ ಪ್ರಾಂಶುಪಾಲ ಡಾ.ಪ್ರಜ್ವಲ್ ಕಜೆ, ಆಡಳಿತ ಮಂಡಳಿಯ ಸಹನಾ ಜೈನ್, ಆಡಳಿತಾಧಿಕಾರಿ ಕೀರ್ತಿನಿಧಿ ಜೈನ್, ವೇಣೂರು ವಿದ್ಯೋದಯ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ ಶಾಂತಿರಾಜ್ ಜೈನ್, ಶೈಕ್ಷಣಿಕ ಸಂಯೋಜಕಿ ನಿಶಾ ಪೂಜಾರಿ, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net