ಆಳ್ವಾಸ್ ವೈದ್ಯಕೀಯ ಕಾಲೇಜು ಕಮ್ಯೂನಿಟಿ ಮೆಡಿಸಿನ್ ವಿಭಾಗ ಮುಖ್ಯಸ್ಥೆ ಡಾ.ಚೇತನಾ ಕೋಡ್ಲಿ ಮಾತನಾಡಿದರು. ಕಂದಾಯ ಅಧಿಕಾರಿ ಜ್ಯೋತಿ ಎಚ್. ಉಪಸ್ಥಿತರಿದ್ದರು. ಕಮ್ಯುನಿಟಿ ಮೊಬಿಲೈಸರ್‌ಗಳಾದ ಆಶಾ, ಅಮಿತಾ, ಚಂದ್ರಿಕಾ, ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ಪೂರ್ಣಿಮಾ, ಫೌಝಿಯ ಅತಿಥಿಗಳನ್ನು ಗೌರವಿಸಿದರು. ಕಮ್ಯೂನಿಟಿ ಮೊಬಿಲೈಸರ್ ಆಶಾ ನಿರೂಪಿಸಿದರು. ಪ್ರಥಮ ದರ್ಜೆ ಸಹಾಯಕಿ ಮೀನಾಕ್ಷಿ ವಂದಿಸಿದರು. ಕಂದಾಯ ಅಧಿಕಾರಿ ಜ್ಯೋತಿ ಎಚ್. ನೇತೃತ್ವದಲ್ಲಿ ವಿವಿಧ ಕ್ರೀಡಾ ಚಟುವಟಿಕೆ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಶೂನ್ಯ ತ್ಯಾಜ್ಯ ಕಾರ್ಯಕ್ರಮವಾಗಿ ನಡೆಸಲಾಯಿತು.