ಸೋಮೇಶ್ವರದಲ್ಲಿ ಚಿರತೆ ದಾಳಿಗೆ ಕರು ಸಾವು

Leopard
Leopard
Published on
ಹೆಬ್ರಿ: ತಾಲೂಕಿನ ನಾಡ್ಪಾಲು ಗ್ರಾಮದ ಸೋಮೇಶ್ವರ ಸೀತಾನದಿಯ ಬೆಳಾರ್ ಹುಸೇನ್ ಸಾಹೇಬ್ ಅವರ ದನದ ಕೊಟ್ಟಿಗೆಗೆ ಚಿರತೆ ದಾಳಿ ನಡೆಸಿದ್ದು, ಕರು ಮೃತಪಟ್ಟಿದೆ.
ಹೆಬ್ರಿ ತಾಲೂಕಿನ ವಿವಿಧೆಡೆ ಚಿರತೆ ದಾಳಿ ಹೆಚ್ಚುತ್ತಿದ್ದು, ಜನರು ಆತಂಕಗೊಂಡಿದ್ದಾರೆ. ಈ ಹಿಂದೆಯೂ ಚಿರತೆ ದಾಳಿಯಿಂದ ಹುಸೇನ್ ಸಾಹೇಬ್ ಅವರ 4 ದನಗಳು ಮೃತಪಟ್ಟಿದ್ದವು. ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು ಪರಿಹಾರ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net