ಹಾಸ್ಯಮಯ '90 ಎಂಎಲ್​' ಭಾರಿ ಕಿಕ್​

ಉಡುಪಿಯ ಪತ್ರಿಕಾಭವನದಲ್ಲಿ '90 ಎಂಎಲ್​' ತುಳು ಸಿನಿಮಾ ನಾಯಕ ವಿನೀತಕುಮಾರ್​ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಂಜಿತ್​ ಬಜಾಲ್​, ರೋಶನ್​ ಶೆಟ್ಟಿ, ರುಹಾನಿ ಶೆಟ್ಟಿ ಇದ್ದರು.
ಉಡುಪಿಯ ಪತ್ರಿಕಾಭವನದಲ್ಲಿ '90 ಎಂಎಲ್​' ತುಳು ಸಿನಿಮಾ ನಾಯಕ ವಿನೀತಕುಮಾರ್​ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಂಜಿತ್​ ಬಜಾಲ್​, ರೋಶನ್​ ಶೆಟ್ಟಿ, ರುಹಾನಿ ಶೆಟ್ಟಿ ಇದ್ದರು.
Published on

* ಸಿನಿಮಾ ನಾಯಕ ವಿನೀತಕುಮಾರ್​ ಸಂತಸ

* ತುಳು ಸಿನಿಮಾಕ್ಕೆ ಪ್ರೋತ್ಸಾಹಿಸಲು ಕರೆ
ಉಡುಪಿ: ರಾಜ್ಯಾದ್ಯಂತ '90 ಎಂಎಲ್​' (ಇದು ಕಾಮಿಡಿಯ ಕಿಕ್​) ತುಳು ಸಿನಿಮಾ ಬಿಡುಗಡೆಗೊಂಡಿದ್ದು, ಪ್ರಮುಖವಾಗಿ ತುಳುನಾಡಿನಲ್ಲಿ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ಲಭಿಸುತ್ತಿದೆ. ಕುಡುಕರ ಪರವಾಗಿ ಇರುವ ಚಿತ್ರ ಇದಲ್ಲ. ಅವರಿಂದ ಸಮಾಜ ಹಾಗೂ ಕುಟುಂಬದವರಿಗೆ ಹೇಗೆಲ್ಲ ತೊಂದರೆ, ಸಮಸ್ಯೆ ಆಗುತ್ತದೆ ಎಂಬ ಸಂದೇಶ ಇರುವ, ಕುಟುಂಬದವರೆಲ್ಲ ನೋಡಬಹುದಾದ ಅಶ್ಲೀಲ ರಹಿತ ಹಾಗೂ ಹಾಸ್ಯಮಯ ಚಿತ್ರವಾಗಿದೆ ಎಂದು ನಾಯಕ ನಟ ವಿನೀತಕುಮಾರ್​ ತಿಳಿಸಿದರು.
ಉಡುಪಿಯ ಪತ್ರಿಕಾ ಭವನದಲ್ಲಿ ಶನಿವಾರ (ಏ.11) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯುವ ಜನರಿಂದ ಸಿದ್ಧಗೊಂಡ ತುಳು ಸಿನಿಮಾ ಇದಾಗಿದೆ. ಡಿ ಡಿ ಪ್ರೊಡಕ್ಷನ್​ ಲಾಂಛನದಲ್ಲಿ, ನಿರ್ಮಾಪಕ ಡಾಲ್ಫಿ ಡಿಸೋಜ ಸಹಕಾರದಲ್ಲಿ ಚಿತ್ರ ಅತ್ಯದ್ಭುತವಾಗಿ ತೆರೆ ಕಂಡಿದೆ. ಮಂಗಳೂರಿನ ಭಾರತ್​ ಮಾಲ್​ನ ಭಾರತ್​ ಸಿನಿಮಾಸ್​ನಲ್ಲಿ ಶುಕ್ರವಾರ ಸಿನಿಮಾ ಬಿಡುಗಡೆಗೊಂಡಿದೆ ಎಂದರು.

60 ಚಿತ್ರ ಮಂದಿರಗಳಲ್ಲಿ ಬಿಡುಗಡೆ

ಚಿತ್ರಕ್ಕೆ ರಂಜಿತ್​ ಸಿ. ಬಜಾಲ್​ ಕಥೆ, ಚಿತ್ರಕಥೆ ಮತ್ತು ನಿರ್ದೇಶನ ಮಾಡಿದ್ದಾರೆ. ತುಳಸಿದಾಸ್​ ಮಂಜೇಶ್ವರ್​ ಸಂಭಾಷಣೆ, ಅರ್ಜುನ್​ ಎಂ.ವಿ. ಛಾಯಾಗ್ರಾಹಣ, ಸೃಜನ್​ ಕುಮಾರ್​ ತೋನ್ಸೆ ಸಂಗೀತ, ಸಚಿನ್​ ರಾಮ್​ ಸಂಕಲನ ಹಾಗೂ ಆಚಾರ್ಯ ಗುರು ಅವರ ಡಿಸೈನ್​ನ ಕೆಲಸದ ಚಿತ್ರದ ಗುಣಮಟ್ಟ ಹೆಚ್ಚಿಸಿದೆ. ತುಳು ಸಿನಿಮಾ ಆಗಿದ್ದರೂ ಸಹ ಮಳಿಯಾಳಂ ಶೈಲಿ ಹೊಂದಿದೆ. ಕುಡಿತದ ವಿಚಾರವಾಗಿ ನೆಗೆಟಿವ್​ ಹಾಗೂ ಪಾಸಿಟಿವ್​ ಎರಡೂ ಸಂಗತಿ ಒಳಗೊಂಡಿದೆ. ರಾಜ್ಯದ 60 ಚಿತ್ರ ಮಂದಿರದಲ್ಲಿ ಬಿಡುಗಡೆಯಾಗಿದೆ. ಉಡುಪಿಯಲ್ಲಿ ಕಲ್ಪನಾ ಥಿಯೇಟರ್​ ಹಾಗೂ ಮಣಿಪಾಲದ ಭಾರತ್​ ಮಾಲ್​ನಲ್ಲಿ ನೋಡಬಹುದಾಗಿದೆ. ಆಸ್ಟ್ರೆಲಿಯಾ ಹಾಗೂ ಯುಎಸ್​ನಲ್ಲೂ ಚಿತ್ರ ಬಿಡುಗಡೆ ಆಗಲಿದೆ ಎಂದು ತಿಳಿಸಿದರು.

ಖ್ಯಾತ ನಟರ ಅಭಿನಯ

ಚಿತ್ರದ ನಿರ್ದೇಶಕ ರಂಜಿತ್​ ಬಜಾಲ್​ ಮಾತನಾಡಿ, ಸುಮಾರು 1 ಕೋಟಿ ರೂ. ಬಜೆಟ್​ನಲ್ಲಿ ಚಿತ್ರ ಸಿದ್ಧಗೊಂಡಿದೆ. ಪ್ರಥಮ ದಿನವೇ ಪ್ರೇಕ್ಷರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ತುಳುನಾಡಿನ ಜನರೆಲ್ಲರೂ ಸಿನಿಮಾ ನೋಡಿ ಸಹಕರಿಸಬೇಕು. ವಿನೀತ್​ಕುಮಾರ್​ ನಾಯಕನಾಗಿ, ರುಹಾನಿ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ತುಳು ಚಿತ್ರರಂಗದ ಹೆಸರಾಂತ ಕಲಾವಿದರಾದ ನವೀನ್​ ಡಿ. ಪಡೀಲ್​, ಅರವಿಂದ ಬೋಳಾರ್​, ರೋಶನ್​ ಶೆಟ್ಟಿ, ಉಮೇಶ್​ ಮಿಜಾರ್​, ದೀಪಕ್​ ರೈ ಪಾಣಾಜೆ, ಪುಷ್ಪರಾಜ್​ ಬೊಳ್ಳಾರು, ಪ್ರಕಾಶ್​, ನಮಿತಾ ಕೆ., ಶೈಲಾಶ್ರೀ, ಧೃತಿ ಅಭಿನಯಿಸಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಚಿತ್ರದ ನಾಯಕಿ ರುಹಾನಿ ಶೆಟ್ಟಿ, ವಿಲನ್​ ಪಾತ್ರಧಾರಿ ರೋಶನ್​ ಶೆಟ್ಟಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net