ಪತ್ತೆಯಾದ 60 ಮೊಬೈಲ್​ ಹಸ್ತಾಂತರ

ಪತ್ತೆ ಮಾಡಿದ ಮೊಬೈಲ್​ಗಳನ್ನು ಉಡುಪಿಯ ನಗರ ಠಾಣೆಯಲ್ಲಿ ಮಾಲೀಕರಿಗೆ ಡಿವೈಎಸ್ಪಿ ಡಿ.ಟಿ. ಪ್ರಭು ಹಸ್ತಾಂತರಿಸಿದರು. ಠಾಣೆಯ ಅಧಿಕಾರಿಗಳಾದ ಮಹೇಶ್​ ಪ್ರಸಾದ್​, ಭರತೇಶ ಕಂಕಣವಾಡಿ, ಈರಣ್ಣ ಶಿರಗುಂಪಿ, ನಾರಾಯಣ ಬಿ. ಗೋಪಾಲಕೃಷ್ಣ ಜೋಗಿ ಇದ್ದರು.
ಪತ್ತೆ ಮಾಡಿದ ಮೊಬೈಲ್​ಗಳನ್ನು ಉಡುಪಿಯ ನಗರ ಠಾಣೆಯಲ್ಲಿ ಮಾಲೀಕರಿಗೆ ಡಿವೈಎಸ್ಪಿ ಡಿ.ಟಿ. ಪ್ರಭು ಹಸ್ತಾಂತರಿಸಿದರು. ಠಾಣೆಯ ಅಧಿಕಾರಿಗಳಾದ ಮಹೇಶ್​ ಪ್ರಸಾದ್​, ಭರತೇಶ ಕಂಕಣವಾಡಿ, ಈರಣ್ಣ ಶಿರಗುಂಪಿ, ನಾರಾಯಣ ಬಿ. ಗೋಪಾಲಕೃಷ್ಣ ಜೋಗಿ ಇದ್ದರು.
Published on

* ಉಡುಪಿ ನಗರ ಠಾಣೆಯಲ್ಲಿ ಮಾಲೀಕರಿಗೆ ವಿತರಣೆ

 ಉಡುಪಿ: ಮೊಬೈಲ್​ ಕಳೆದುಕೊಂಡಿದ್ದ ಹಾಗೂ ಕಳ್ಳತನವಾಗಿದ್ದ ಜಿಲ್ಲೆಯ 60 ಜನರಿಗೆ ಉಡುಪಿ ನಗರ ಪೊಲೀಸ್​ ಠಾಣೆಯಲ್ಲಿ ಮಂಗಳವಾರ (ಡಿ.16) ಹಸ್ತಾಂತರ ಮಾಡಲಾಯಿತು. ಉಡುಪಿ ಉಪವಿಭಾಗ ಪೊಲೀಸ್​ ಉಪಾಧೀಕ್ಷಕ ಪ್ರಭು ಡಿ.ಟಿ. ಅವರು, ತನಿಖೆ ಮೂಲಕ ಪತ್ತೆ ಮಾಡಿ ವಶಪಡಿಸಿಕೊಂಡಿದ್ದ ಮೊಬೈಲ್​ಗಳನ್ನು ಮಾಲೀಕರಿಗೆ ವಿತರಿಸಿದರು.
ಕೆಎಸ್​ಪಿ ಆ್ಯಪ್​ ಮೂಲಕ ಮೊಬೈಲ್​ ಕಾಣೆಯಾಗಿರುವ ಕುರಿತು ದೂರು ಸ್ವೀಕರಿಸಲಾಗಿತ್ತು. ಭಾರತ ಸರ್ಕಾರ ಜಾರಿಗೊಳಿಸಿರುವ 'ಸಿಇಐಆರ್​' ಪೋರ್ಟಲ್​ ಮೂಲಕ ದೂರುದಾರರ ಎಲ್ಲ ಮೊಬೈಲ್​ಗಳನ್ನು ಬ್ಲಾಕ್​ ಮಾಡಲಾಗಿತ್ತು. ಅಲ್ಲದೆ, ಇದೇ ಪೋರ್ಟಲ್​ ಸಹಕಾರದಲ್ಲಿ 60 ಮೊಬೈಲ್​ಗಳನ್ನು ಪತ್ತೆ ಮಾಡಲಾಗಿತ್ತು.
ಮೊಬೈಲ್​ ಪತ್ತೆಯ ಕಾರ್ಯಾಚರಣೆಯಲ್ಲಿ ಉಡುಪಿ ನಗರ ಪೊಲೀಸ್​ ಠಾಣೆಯ ಪ್ರಭಾರ ಪೊಲೀಸ್​ ನಿರೀಕ್ಷಕ ಮಹೇಶ್​ ಪ್ರಸಾದ್​, ಪೊಲೀಸ್​ ಉಪನಿರೀಕ್ಷಕರಾದ ಭರತೇಶ ಕಂಕಣವಾಡಿ, ಈರಣ್ಣ ಶಿರಗುಂಪಿ, ನಾರಾಯಣ ಬಿ., ಗೋಪಾಲಕೃಷ್ಣ ಜೋಗಿ ಮತ್ತು ಠಾಣೆಯ ಗಣಕಯಂತ್ರ ಸಿಬ್ಬಂದಿ ಸಿಪಿಸಿ ವಿನಯಕುಮಾರ, ಸಿಪಿಸಿ ಜಾಸ್ವಾ ಪಾಲ್ಗೊಂಡಿದ್ದರು.
ಕಾಣೆಯಾಗಿದ್ದ ಮೊಬೈಲ್​ ಪತ್ತೆ ಮಾಡಿಕೊಟ್ಟ ಪೊಲೀಸರಿಗೆ ದೂರುದಾರರು ಕೃತಜ್ಞತೆ ಸಲ್ಲಿಸಿ, ಸಂತಸ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net