ರಂಗಚಟುವಟಿಕೆಯಿಂದ ಸೃಜನಶೀಲ ವ್ಯಕ್ತಿತ್ವ

ಉಡುಪಿಯಲ್ಲಿ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆ ಆಯೋಜಿಸಿದ್ದ ರಂಗಹಬ್ಬದಲ್ಲಿ ಕುಸುಮಾ ಕಾಮತ್​ ಅವರಿಗೆ 'ರಂಗ ಸಾಧಕಿ' ಪ್ರಶಸ್ತಿ ನೀಡಲಾಯಿತು. ಹರಿಪ್ರಸಾದ್​ ರೈ, ದಿವಾಕರ್​ ಶೆಟ್ಟಿ, ಅಧ್ಯಕ್ಷ ದಿನೇಶ್​ ಸಾಲಿಯಾನ್​, ಪ್ರಭಾಕರ್​ ತಿಂಗಳಾಯ, ಹರೀಶ್​ ಪೂಜಾರಿ, ರಾಮಚಂದ್ರ ಪೂಜಾರಿ, ಪ್ರಕಾಶ್​ ಜಿ. ಕೊಡವೂರು, ವಿನಯ್​ ಕಲ್ಮಾಡಿ ಇದ್ದರು.
ಉಡುಪಿಯಲ್ಲಿ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆ ಆಯೋಜಿಸಿದ್ದ ರಂಗಹಬ್ಬದಲ್ಲಿ ಕುಸುಮಾ ಕಾಮತ್​ ಅವರಿಗೆ 'ರಂಗ ಸಾಧಕಿ' ಪ್ರಶಸ್ತಿ ನೀಡಲಾಯಿತು. ಹರಿಪ್ರಸಾದ್​ ರೈ, ದಿವಾಕರ್​ ಶೆಟ್ಟಿ, ಅಧ್ಯಕ್ಷ ದಿನೇಶ್​ ಸಾಲಿಯಾನ್​, ಪ್ರಭಾಕರ್​ ತಿಂಗಳಾಯ, ಹರೀಶ್​ ಪೂಜಾರಿ, ರಾಮಚಂದ್ರ ಪೂಜಾರಿ, ಪ್ರಕಾಶ್​ ಜಿ. ಕೊಡವೂರು, ವಿನಯ್​ ಕಲ್ಮಾಡಿ ಇದ್ದರು.
Published on

* ಹರಿಪ್ರಸಾದ್​ ರೈ ಅಭಿಪ್ರಾಯ

* ಸುಮನಸಾ ನಾಟಕೋತ್ಸವ

ಉಡುಪಿ: ಸುಮನಸಾ ಕೊಡವೂರು ಸಂಘಟನೆ ಉಡುಪಿಯ ಶ್ರೀಮಂತ ಸಾಂಸ್ಕೃತಿಕ ಕಲೆಯನ್ನು ಬೆಳೆಸುವ ಕೆಲಸ ಮಾಡುತ್ತಿದೆ. ನಡಿಗೆ, ಓಟಗಳು ದೈಹಿಕವಾಗಿ ಆರೋಗ್ಯ ಹೆಚ್ಚಿಸಿದರೆ, ರಂಗಚಟುವಟಿಕೆಗಳು ಸೃಜನಶೀಲತೆ ಹೆಚ್ಚಿಸುತ್ತವೆ. ಮಾನಸಿಕ ಒತ್ತಡ ಕಡಿಮೆಗೊಳಿಸಿ ಉತ್ತಮ ವ್ಯಕ್ತಿತ್ವ ರೂಪಿಸುತ್ತದೆ ಎಂದು ಮಣಿಪಾಲ ಎಚ್​ಪಿಆರ್​ ಸಮೂಹ ಸಂಸ್ಥೆಯ ಅಧ್ಯಕ್ಷ ಹರಿಪ್ರಸಾದ್​ ರೈ ಅಭಿಪ್ರಾಯಪಟ್ಟರು.
ಉಡುಪಿಯ ಅಜ್ಜರಕಾಡುನಲ್ಲಿರುವ ಭುಜಂಗ ಪಾರ್ಕ್​ನ ಬಯಲು ರಂಗಮಂದಿರದಲ್ಲಿ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ನಾಟಕೋತ್ಸವ ರಂಗಹಬ್ಬ-14ರ ಐದನೇ ದಿನವಾದ ಗುರುವಾರ (ಫೆ.26) ರಾತ್ರಿ ಆಯೋಜಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಹುಕ್ಷೇತ್ರದ ಸಾಧಕಿ ಕುಸುಮಾ ಕಾಮತ್​ ಅವರಿಗೆ "ರಂಗ ಸಾಧಕಿ' ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. 
ಕೊಡವೂರುಶಿರಿಡಿ ಸಾಯಿಬಾಬ ಮಂದಿರದ ಧರ್ಮದರ್ಶಿದಿವಾಕರ್​ ಶೆಟ್ಟಿ ತೋಟದಮನೆ, ಬೊಳ್ಜೆ ಶ್ರೀ ಬ್ರಹ್ಮ ಬೈದೇರುಗಳ ಗರೋಡಿ ಅಧ್ಯಕ್ಷ ದಿನೇಶ್​ ಸಾಲಿಯಾನ್​, ಸಿತಾರಾ ಎಂಟರ್​ಪೆಸಸ್​ನ ಪಾಲುದಾರಪ್ರಭಾಕರ್​ ತಿಂಗಳಾಯ, ಮಲ್ಪೆಯ ಉದ್ಯಮಿ ಹರೀಶ್​ ಪೂಜಾರಿ, ಉಡುಪಿ ವ್ಯಾಸ ಮುದ್ರಣ ಮಾಲೀಕ ರಾಮಚಂದ್ರ ಪೂಜಾರಿ,ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ಪ್ರಕಾಶ್​ ಜಿ. ಕೊಡವೂರು, ಉಪಾಧ್ಯಕ್ಷ ವಿನಯ್​ ಕಲ್ಮಾಡಿ ಉಪಸ್ಥಿತರಿದ್ದರು.
ಪ್ರಜ್ಞಾಶ್ರೀ ಸ್ವಾಗತಿಸಿದರು. ಶ್ರೀವತ್ಸ ರಾವ್​ ಕಾರ್ಯಕ್ರಮ ನಿರೂಪಿಸಿದರು. ಪ್ರಜ್ಞಾ ವಂದಿಸಿದರು.
"

ಕಲಾವಿದರಿಗೆ ಅನೇಕ ನೋವುಗಳಿರುತ್ತವೆ. ಆದರೆ, ರಂಗದ ಮೇಲೆ ಬಂದಾಗ ಎಲ್ಲ ನೋವು ಮರೆತು ಪ್ರದರ್ಶನ ನೀಡುತ್ತಾರೆ. ಕಲೆಗೆ ಭಾಷೆಯ ಹಂಗಿಲ್ಲ. ಯಾವುದೇ ಭಾಷೆಯಾದರೂ ಕಲೆ ಅರ್ಥವಾಗುತ್ತದೆ. ನನ್ನನ್ನು ಪ್ರೋತ್ಸಾಹಿಸಿದ ಎಲ್ಲರಿಗೂ ಈ ಸನ್ಮಾನ ಸಲ್ಲಲಿದೆ. ಕಠಿಣ ಪರಿಶ್ರಮ, ಶಿಸ್ತು, ಹೊಂದಾಣಿಕೆ ಇದ್ದಾಗ ಮಾತ್ರ ಮುಂದುವರಿಯಲು ಸಾಧ್ಯ. ಅವೆಲ್ಲ ಗುಣ ಸುಮನಸಾ ಕೊಡವೂರು ತಂಡದಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net