ಅಂತಾರಾಜ್ಯ ಚೋರ ಉಮೇಶ್ ರೆಡ್ಡಿಯಿಂದ 55 ಗ್ರಾಂ ಚಿನ್ನ ವಶ

ಚಿನ್ನಾಭರಣ
ಚಿನ್ನಾಭರಣ
Published on
ಪಡುಬಿದ್ರಿ: ಕಳವು ಪ್ರಕರಣದಲ್ಲಿ ಬಂಧಿತನಾಗಿರುವ ಅಂತಾರಾಜ್ಯ ಚೋರ ಉಮೇಶ್ ಬಳೆಗಾರ ಅಲಿಯಾಸ್ ಉಮೇಶ ರೆಡ್ಡಿ(47) ಎಂಬಾತನಿಂದ 55 ಗ್ರಾಂ ತೂಕದ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿ ಡಿ.12ರಂದು ಕಾಪು ತಾಲೂಕು ಮಲ್ಲಾರು ಗ್ರಾಮದ ರಾಘವೇಂದ್ರ ಕಿಣಿ ಎಂಬುವರ ಮನೆಯಿಂದ ಕಳವು ಮಾಡಿದ್ದ ಚಿನ್ನಾಭರಣವನ್ನು ತಮಿಳುನಾಡಿನ ಮಧುರೈ ಎಂಬಲ್ಲಿ ಮಾರಾಟ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದನು. ಅದರಂತೆ ಉಡುಪಿ ಜಿಲ್ಲಾ ಪೊಲೀಸರ ನೇತೃತ್ವದಲ್ಲಿ ಕಾಪು ಪೊಲೀಸರು ಕಾರ್ಯಾಚರಣೆ ನಡೆಸಿ ಅಪರಾಧ ಪತ್ತೆ ದಳದ ಸಿಬ್ಬಂದಿಯೊಂದಿಗೆ ಆರೋಪಿ ಉಮೇಶ್ ಬಳೆಗಾರನನ್ನು ಕರೆದುಕೊಂಡು ಮಧುರೈಗೆ ತೆರಳಿದ್ದರು. ಆತ ಅಲ್ಲಿ ಮಾರಾಟ ಮಾಡಿದ್ದ ಚಿನ್ನವನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net