ಇಂದ್ರಪ್ರಸ್ಥ ವಿದ್ಯಾಲಯದ 7ನೇ ತರಗತಿಯ ವಿದ್ಯಾರ್ಥಿನಿ ಸಮೀಕ್ಷಾಗೆ ಗುರುವಾರ ಉಪ್ಪಿನಂಗಡಿಯ ಅಂಡರ್ ಪಾಸ್ ಬಳಿ ರಸ್ತೆಯಲ್ಲಿ 5 ಪವನ್ ತೂಕದ ಕರಿಮಣಿ ಸರವೊಂದು ಸಿಕ್ಕಿತ್ತು. ಅದನ್ನು ಆಕೆ ತನ್ನ ಪಾಲಕರಾದ ಸಂಜೀವ ಮತು ವಿಜಯಲಕ್ಷ್ಮೀ ಅವರೊಂದಿಗೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ತಂದೊಪ್ಪಿಸಿದ್ದರು. ಈ ಮಧ್ಯೆ ಇಲ್ಲಿನ ರಾಮನಗರ ನಿವಾಸಿ ನಾರಾಯಣ ಕೆ. ಎಂಬುವರ ಪತ್ನಿ ಭವ್ಯಾ ರಸ್ತೆಯುಲ್ಲಿ ಏನೋ ಹುಡುಕಾಡುತ್ತಿರುವುದನ್ನು ಗಮನಿಸಿದ ಪೊಲೀಸರು ವಿಚಾರಿಸಿದಾಗ ಐದು ಪವನ್ ತೂಕದ ಕರಿಮಣಿ ಸರ ಕಳೆದುಹೋಗಿರುವುದಾಗಿ ತಿಳಿಸಿದರು.