ಪ್ರಶಾಂತ್ ಕಿಶೋರ್, ಸುನೀಲ್ ಕಾನುಗೋಲು ಮುಂತಾದವರ ಸಲಹೆಯಂತೆ ತಮಿಳುನಾಡು ಡಿಎಂಕೆ ಸರ್ಕಾರವು 2021ರಲ್ಲಿ ತಮಿಳುನಾಡಿನಲ್ಲಿ ಮಾಧ್ಯಮವನ್ನು ಬುಡಮೇಲು ಮಾಡಲು ಬಯಸಿತು. ಅದಕ್ಕಾಗಿ ವಿವಿಧ ಏಜೆನ್ಸಿ, ಮಧ್ಯವರ್ತಿ ಸಂಸ್ಥೆಗಳಿಗೆ ಹೊರಗುತ್ತಿಗೆ ನೀಡಿತು. ಅದಕ್ಕಾಗಿ ಖ್ಯಾತ ಹಾಗೂ ನಿಷ್ಠಾವಂತ ಪತ್ರಕರ್ತರ ತಂಡವನ್ನು ನೇಮಿಸಿಕೊಂಡಿತ್ತು. ಆದರೆ, ಡಿಎಂಕೆ ಉದಯನಿಧಿ ಅವರ ಕಾರ್ಯಸೂಚಿಯಂತೆ ಕೆಲಸ ಮಾಡಲು ಆ ಪತ್ರಕರ್ತರಿಗೆ ಏಜೆನ್ಸಿ ಮತ್ತು ಮಧ್ಯವರ್ತಿಗಳು ಕೇವಲ ಹಣಕ್ಕಿಂತ ಹೆಚ್ಚಿನದನ್ನು ನೀಡಲು ಬಯಸಿದ್ದರು. ವಿರೋಧಿ ವೈಸ್ ಸ್ಕ್ವಾಡ್ನಲ್ಲಿರುವ ದುಷ್ಟ ಅಂಶಗಳನ್ನು ಮತ್ತು ಅನ್ನಾ ವಿಶ್ವವಿದ್ಯಾಲಯದ ಪ್ರೊಫೆಸರ್ ಚಿತ್ರಕಲಾ ಎಸ್. ಗೋಪಾಲನ್ ಅವರನ್ನು ಬಳಸಿಕೊಂಡು ಪತ್ರಕರ್ತರಿಗೆ (ಕೆಳಗೆ ಅವರ ಹೆಸರು ಉಲ್ಲೇಖಿಸಲಾಗಿದೆ) ಅಪ್ರಾಪ್ತ ಬಾಲಕಿಯರನ್ನು ಲೈಂಗಿಕ ಅಗತ್ಯತೆಗಳಿಗೆ ಪೂರೈಸಲಾಯಿತು. ಚೆನ್ನೆ$ನ ಆಯಕುಡಿ, ಚಿತ್ತೂರು (ಎಪಿ)ನಲ್ಲಿರುವ ಅನಾಥಾಶ್ರಮಗಳಿಂದ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳನ್ನು ಕರೆತಂದಿದ್ದರು. ಡಿಎಂಕೆ ನಾಯಕತ್ವಕ್ಕೆ ಈ ದಂಧೆಯ ಬಗ್ಗೆ ಸಂಪೂರ್ಣ ಜ್ಞಾನವಿದೆ. ಆದರೆ, ಹುಡುಗಿಯರು ಆಘಾತಕ್ಕೊಳಗಾಗುತ್ತಿದ್ದಾರೆ. ಉತ್ತೇಜನಕ್ಕಾಗಿ ಮೆಥ್ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗುತ್ತಿದೆ. ಈ ಮಾಹಿತಿಯನ್ನು ಡಿಎಂಕೆಯ ಜಾಫರ್ ಸಾಧಿಕ್ ಒದಗಿಸಿದ್ದಾರೆ ಎಂದು ಬರೆಯಲಾಗಿದೆ.