360 ಯೂನಿಟ್ ರಕ್ತ ಸಂಗ್ರಹಿಸಿ ದಾಖಲೆ

 ಕುಂದಾಪುರ ಆನಗಳ್ಳಿಯಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಯಿತು. ಪ್ರಮುಖರಾದ ಕೋಟ ಶ್ರೀನಿವಾಸ ಪೂಜಾರಿ, ಪ್ರಮುಖರಾದ ಶರತ್ ಆನಗಳ್ಳಿ, ಎ.ಕಿರಣ್ ಕುವಾರ್ ಕೊಡ್ಗಿ ಮೊದಲಾದವರಿದ್ದರು.
ಕುಂದಾಪುರ ಆನಗಳ್ಳಿಯಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಯಿತು. ಪ್ರಮುಖರಾದ ಕೋಟ ಶ್ರೀನಿವಾಸ ಪೂಜಾರಿ, ಪ್ರಮುಖರಾದ ಶರತ್ ಆನಗಳ್ಳಿ, ಎ.ಕಿರಣ್ ಕುವಾರ್ ಕೊಡ್ಗಿ ಮೊದಲಾದವರಿದ್ದರು.
Published on
ಕುಂದಾಪುರ: ಕರೊನಾ ನಂತರ ರಕ್ತದಾನ ಶಿಬಿರ ನಡೆಸಿ ಜಿಲ್ಲೆಯಲ್ಲಿ 360 ಯೂನಿಟ್ ರಕ್ತ ಸಂಗ್ರಹಿಸುವ ಮೂಲಕ ಸಂಸ್ಥೆ ದಾಖಲೆ ನಿರ್ಮಿಸಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಆನಗಳ್ಳಿ ಶರತ್ ಕಾಂಚನ್ ಸಾರಥ್ಯದಲ್ಲಿ ಆನಗಳ್ಳಿ ಗೆಳೆಯರ ಬಳಗ, ಆನಗಳ್ಳಿ ದತ್ತಾಶ್ರಮ, ಉಡುಪಿ ಅಭಯ ಹಸ್ತ ಚಾರಿಟೆಬಲ್ ಟ್ರಸ್ಟ್ ಹಾಗೂ ಇತರ ಸಂಟನೆಗಳ ಸಹಕಾರದೊಂದಿಗೆ ಕುಂದಾಪುರದ ಆನಗಳ್ಳಿಯಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ವಾತನಾಡಿದರು.
ಶಿಬಿರದ ರೂವಾರಿ ಶರತ್ ಆನಗಳ್ಳಿ ಅವರನ್ನು ಸನ್ಮಾನಿಸಲಾಯಿತು. ಶಿಬಿರದಲ್ಲಿ 260 ಯೂನಿಟ್ ರಕ್ತ ಸಂಗ್ರಹಿಸಲಾಯಿತು.
ಕುಂದಾಪುರ ಶಾಸಕ ಎ.ಕಿರಣ್ ಕುವಾರ್ ಕೊಡ್ಗಿ, ವಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಕುಂದಾಪುರ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ನಾಗೇಶ್, ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ, ಫೆರ್ಮಿನಾ ಸುಭಾಷ್ ಪೂಜಾರಿ, ಕುಂದಾಪುರ ಸಂಚಾರಿ ಪೊಲೀಸ್ ಠಾಣಾ ಠಾಣಾಧಿಕಾರಿ ಅನುಪ್ ನಾಯಕ್, ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಕುಂದಾಪುರ ಟಕಾಧ್ಯಕ್ಷ ಜಯಕರ ಶೆಟ್ಟಿ, ಹಂಸರಾಜ್ ಶೆಟ್ಟಿ, ಸೌರಭಿ ಪೈ, ಡಾ.ದೀಪಿಕಾ, ಗಣೇಶ್ ಸಂಗಮ್, ಬಾಲಕೃಷ್ಣ ಮದ್ದೋಡಿ, ಉದಯ ಕುವಾರ್ ಹಟ್ಟಿಯಂಗಡಿ, ಸತೀಶ್ ಸಾಲ್ಯಾನ್ ಮೊದಲಾದವರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net