ಮಂದಾರ್ತಿಯಲ್ಲಿ ಹಸೆಮಣೆ ಏರಿದ 36 ಜೋಡಿ

 ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ 24ನೇ ವರ್ಷದ ಸಾಮೂಹಿಕ ವಿವಾಹ ಜರುಗಿತು.
ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ 24ನೇ ವರ್ಷದ ಸಾಮೂಹಿಕ ವಿವಾಹ ಜರುಗಿತು.
Published on
ಕೊಕ್ಕರ್ಣೆ: ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ 24ನೇ ವರ್ಷದ ಸಾಮೂಹಿಕ ವಿವಾಹ(ವಾಂಗಲ್ಯ ಭಾಗ್ಯ) ಬುಧವಾರ ಜರುಗಿತು. ವಿವಿಧ ಜಿಲ್ಲೆಗಳ 36 ಜೋಡಿ ಹಸೆಮಣೆ ಏರಿದರು.
ವಧುವಿಗೆ ಕರಿಮಣಿ ಸರ, ಧಾರೆ ಸೀರೆ, ವರನಿಗೆ ಕುರ್ತಾ ಪೈಜಾಮು ಹಾಗೂ ಹೂವಿನ ಹಾರವನ್ನು ದೇಗುಲ ವತಿಯಿಂದ ನೀಡಲಾಯಿತು. ಅರ್ಚಕ ಎಂ.ಶ್ರೀಪತಿ ಅಡಿಗ ಮತ್ತು ಅರ್ಚಕ ವೃಂದದಿಂದ ಧಾರ್ಮಿಕ ವಿಧಿವಿಧಾನ ಜರುಗಿತು. ಗ್ರಾಮ ಆಡಳಿತಾಧಿಕಾರಿ ರಶ್ಮಿ ವಿವಾಹ ನೋಂದಣಿಗೆ ಕ್ರಮ ವಹಿಸಿದರು. ಈವರೆಗೆ ಕ್ಷೇತ್ರದಲ್ಲಿ 733 ಜೋಡಿ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡಿತ್ತು.
ಅಧ್ಯಕ್ಷ ಎಚ್.ಧನಂಜಯ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಎಸ್.ಪಿ.ಬಿ.ಮಹೇಶ್, ಆನುವಂಶಿಕ ಮೊಕ್ತೇಸರರಾದ ಎಚ್.ಪ್ರಭಾಕರ ಶೆಟ್ಟಿ, ಎಚ್.ಶಂಭು ಶೆಟ್ಟಿ, ಆರ್.ಶ್ರೀನಿವಾಸ ಶೆಟ್ಟಿ, ಎಚ್.ಜಯರಾಮ ಶೆಟ್ಟಿ, ದೇಗುಲ ಇಂಜಿನಿಯರ್ ಪ್ರದೀಪ ಶೆಟ್ಟಿ ಕೆ., ಪ್ರಮುಖರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಶೇಡಿಕೊಡ್ಲು ವಿಠಲ ಶೆಟ್ಟಿ, ಕೆ.ಗಣಪಯ್ಯ ಶೆಟ್ಟಿ, ಉದಯಭಾಸ್ಕರ ಶೆಟ್ಟಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಮೇಲ್ವಿಚಾರಕಿ ವಾಲತಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net