ಮಂಗಲ್ಪಾಡಿ ಅಡ್ಕ ಹೌಸ್ ನಿವಾಸಿ ಅಬ್ದುಲ್ ಅಜೀಸ್(42), ನೆಕ್ರಾಜೆ ಅಲಂಗೋಲ್ ಹೌಸ್ ನಿವಾಸಿ ಅಬುಬಕ್ಕರ್ ಕೆ.ವಿ(32), ಮೊಗ್ರಾಲ್‌ನ ಮುಸ್ತಫಾ(44) ಬಂಧಿತರು. ಕುಂಬಳೆ ಪೊಲೀಸ್ ಠಾಣೆ ಎಸ್‌ಐ ಅನೂಪ್ ನೇತೃತ್ವದ ತಂಡ ಮಂಗಳವಾರ ರಾತ್ರಿ ಮಂಗಲ್ಪಾಡಿ ಅಡ್ಕ ರಸ್ತೆ ರೋಯಲ್ ಸ್ಟ್ರೀಟ್‌ನಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಆ ಮಾರ್ಗದಲ್ಲಿ ಬಂದ ಕಾರನ್ನು ನಿಲ್ಲಿಸಲು ಸೂಚಿಸಿದ್ದಾರೆ. ನಿಲ್ಲಿಸದೆ ಪರಾರಿಯಾಗಲೆತ್ನಿಸಿದಾಗ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಹೋಗಿದ್ದು ಕಾರಿನ ಚಕ್ರ ಹೊಂಡದಲ್ಲಿ ಹೂತುಕೊಂಡಿದೆ.