ಏ.25ರಂದು ಅಸೋಸಿಯೇಷನ್​ ಆಫ್​ ಅಲಯನ್ಸ್​ ಕ್ಲಬ್​ನ ಪದ ಗ್ರಹಣ

ಉಡುಪಿಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಲೈ ಸುನೀಲ್​ ಕುಮಾರ್​ ಶೆಟ್ಟಿ ಮಾತನಾಡಿದರು.  ಡಾ. ತಲ್ಲೂರು ಶಿವರಾಂ ಶೆಟ್ಟಿ, ಶ್ರೀಧರ್​ ಶೆಣವ, ಸುಧಾಕರ್​ ಹೆಗ್ಡೆ, ಕೆ.ಜಗದೀಶ್​ ಹೊಳ್ಳ ಇದ್ದರು.
ಉಡುಪಿಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಲೈ ಸುನೀಲ್​ ಕುಮಾರ್​ ಶೆಟ್ಟಿ ಮಾತನಾಡಿದರು. ಡಾ. ತಲ್ಲೂರು ಶಿವರಾಂ ಶೆಟ್ಟಿ, ಶ್ರೀಧರ್​ ಶೆಣವ, ಸುಧಾಕರ್​ ಹೆಗ್ಡೆ, ಕೆ.ಜಗದೀಶ್​ ಹೊಳ್ಳ ಇದ್ದರು.
Published on

ಡಿಸ್ಟ್ರಿಕ್ಟ್​ ಗವರ್ನರ್ ಅಲೈ ಸುನೀಲ್​ ಕುಮಾರ್​ ಶೆಟ್ಟಿ ಮಾಹಿತಿ

* ದ್ವಿತೀಯ ಸಂಪುಟ ಪದ ಪ್ರದಾನ ಕಾರ್ಯಕ್ರಮ

ಉಡುಪಿ: ಭಾರತೀಯ ಮೂಲದ ಸೇವಾ ಸಂಸ್ಥೆಯಾದ ಅಸೋಸಿಯೇಷನ್​ ಆಫ್​ ಅಲಯನ್ಸ್​ ಕ್ಲಬ್​ ಇಂಟರ್​ನ್ಯಾಷನಲ್​ ಡಿಸ್ಟ್ರಿಕ್ಟ್​ 275-ಎಸ್​ ಇದರ ದ್ವಿತೀಯ ಸಂಪುಟ ಪದ ಪ್ರದಾನ ಕಾರ್ಯಕ್ರಮ ಏ.25ರಂದು ಸಂಜೆ 5 ಗಂಟೆಗೆ ಉಡುಪಿಯ ಅಂಬಲಪಾಡಿಯಲ್ಲಿರುವ ಅಮೃತ ಗಾರ್ಡನ್​ನಲ್ಲಿ ನಡೆಯಲಿದೆ ಎಂದು ಕ್ಲಬ್​ನ ಡಿಸ್ಟ್ರಿಕ್ಟ್​ ಗವರ್ನರ್​ ಅಲೈ ಸುನೀಲ್​ ಕುಮಾರ್​ ಶೆಟ್ಟಿ ತಿಳಿಸಿದರು.
ಉಡುಪಿಯ ಪತ್ರಿಕಾ ಭವನದಲ್ಲಿ ಗುರುವಾರ (ಏ.23) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಲೈ ಡಾ. ಬಾಲಜಿ ಶಾಸ್ತ್ರಿ ಪದ ಪ್ರದಾನ ಸಮಾರಂಭ ನೆರವೇರಿಸಲಿದ್ದಾರೆ. ನಿಟ್ಟೆ ವಿಶ್ವವಿದ್ಯಾನಿಲಯದ ಉಪಕುಲಪತಿ ಎಂ.ಎಸ್​. ಮೂಡಿತ್ತಾಯ, ಅಸೋಸಿಯೇಷನ್​ ಅಲೆಯನ್ಸ್​ ಕ್ಲಬ್​ ಇಂಟರ್​ನ್ಯಾಷನಲ್​ನ ಕಾರ್ಯದರ್ಶಿ ಅಲೈ ಡಾ. ನಾಗರಾಜ್​ ಬೈರಿ, ಅಂತಾರಾಷ್ಟ್ರೀಯ ನಿರ್ದೇಶಕ ಅಲೈ ಡಾ. ಶ್ರೀಧರ್​ ಶೆಣವ ಮತ್ತು ಅಂತಾರಾಷ್ಟ್ರೀಯ ಕಮಿಟಿಯ ಚೇರ್​ಪರ್ಸನ್​ ಡಾ. ತಲ್ಲೂರು ಶಿವರಾಂ ಶೆಟ್ಟಿ, ಅಂತಾರಾಷ್ಟ್ರೀಯ ಕಮಿಟಿಯ ಚೇರ್​ಪರ್ಸನ್​ ಅಲೈ ಕೆ.ಎಂ. ಮುನಿಯಪ್ಪ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಾ. ತಲ್ಲೂರು ಶಿವರಾಂ ಶೆಟ್ಟಿ, ಶ್ರೀಧರ್​ ಶೆಣವ, ಸುಧಾಕರ್​ ಹೆಗ್ಡೆ, ಕೆ.ಜಗದೀಶ್​ ಹೊಳ್ಳ ಇದ್ದರು.

ವಿವಿಧ ಜಾಗೃತಿ ಕಾರ್ಯಕ್ರಮ 

ಈ ವರ್ಷ ಅಲಯನ್ಸ್​ ಜಿಲ್ಲಾ ಕಾರ್ಯಕ್ರಮದ ನಿಮಿತ್ತ ಪರಿಸರ ಸಂರಕ್ಷಣೆ, ಹಸಿವು ನೀಗಿಸುವಿಕೆ, ಶಿಕ್ಷಣ, ರಸ್ತೆ ಸುರಕ್ಷತೆ ಮತ್ತು ಸಂಚಾರ ಸಿಕ್ಕು (ಟ್ರಾಫಿಕ್​) ಜಾಗೃತಿ, ಕೃಷಿ ಉತ್ತೇಜನ, ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮಾದಕ ಔಷಧದ ದುರ್ಬಳಕೆ ಮತ್ತು ಅದರ ತಡೆಗಟ್ಟುವಿಕೆ ಕುರಿತು ಜಾಗೃತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಲೈ ಸುನೀಲ್​ ಕುಮಾರ್​ ಶೆಟ್ಟಿ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net