ಹೆದ್ದಾರಿ, ಪ್ರಮುಖ ರಸ್ತೆಗಳಲ್ಲಿ ಅಕ್ರಮ ಪಾರ್ಕಿಂಗ್, ಅಪಾಯಕಾರಿ ತಿರುವುಗಳ ಕಾರಣಗಳಿಂದ ಒಂದು ಜೀವ ಹೋದರೂ, ಅದು ಸರ್ಕಾರದ ವೈಫಲ್ಯ ಸೂಚಿಸುತ್ತದೆ. ಜನರ ಜೀವ, ಸುರಕ್ಷಿತ ವಾತಾವರಣ ಕಲ್ಪಿಸುವುದು ಸರ್ಕಾರದ ಕರ್ತವ್ಯವೆಂದು ಸುಪ್ರೀಂ ಕೋರ್ಟ್ ಹೇಳಿದೆ. ಅದರಂತೆ ಬ್ಲಾಕ್ಸ್ಪಾಟ್, ಅಪಾಯಕಾರಿ ತಿರುವುಗಳು, ಕೆಲ ಜಂಕ್ಷನ್ಗಳು, ಹೆದ್ದಾರಿಯ ಬಸ್ ಬೇಗಳ ಅಭಿವೃದ್ಧಿ ಕಾರ್ಯಗಳು ಆದ್ಯತೆ ನೆಲೆಯಲ್ಲಿ ತ್ವರಿತಗತಿಯಲ್ಲಿ ಆಗಬೇಕಾಗಿದೆ.