2583 ಲೀಟರ್ ಮದ್ಯ, ಎರಡು ವಾಹನ ವಶ

ನಾಲ್ವರು ಆರೋಪಿಗಳ ಬಂಧನ
ಅಕ್ರಮವಾಗಿ ಮದ್ಯ ಸಾಗಿಸುತ್ತಿರುವವರನ್ನು ಸೊತ್ತು ಸಹಿತ ವಶಕ್ಕೆ ಪಡೆಯಲಾಯಿತು.
ಅಕ್ರಮವಾಗಿ ಮದ್ಯ ಸಾಗಿಸುತ್ತಿರುವವರನ್ನು ಸೊತ್ತು ಸಹಿತ ವಶಕ್ಕೆ ಪಡೆಯಲಾಯಿತು.
Published on: 

ಪಡುಬಿದ್ರಿ: ಗೋವಾದಿಂದ ಮಂಗಳೂರಿಗೆ ಅಕ್ರಮವಾಗಿ ಮದ್ಯದ ಬಾಟಲಿಗಳನ್ನು ಸಾಗಾಟ ಮಾಡುತ್ತಿದ್ದ ವಾಹನಗಳು ಹಾಗೂ ಬೆಂಗಾವಲು ವಾಹನವನ್ನು ಹೆಜಮಾಡಿ ಟೋಲ್‌ಗೇಟ್ ಬಳಿ ಜಪ್ತಿ ಮಾಡಿದ ಪೊಲೀಸರು ಆರೋಪಿಗಳಾದ ಕಾರವಾರ ಕಿನ್ನಾರ ಗ್ರಾಮದ ವಿನಯ್(47), ನಂದಗಡ ಗಜಾನನ ಮಹಾಬಲೇಶ್ವರ ನಾಯ್ಕ(45), ತಾಳೆಕೆರೆ ಅಮದಹಳ್ಳಿ ಸುಜಿತ್ ತಾಳೆಕೆರೆ(25), ಶಿರ್ವಾಡ ಗ್ರಾಮದ ಲಾರೆನ್ಸ್ ಥಾಮಸ್ ಮೆಂಡೋನ್ಸ್(49) ಎಂಬುವರನ್ನು ಬುಧವಾರ ಬಂಧಿಸಿದ್ದಾರೆ.

ಬಂಧಿತರಿಂದ 14.35 ಲಕ್ಷ ರೂ.ಮೌಲ್ಯದ 2583 ಲೀಟರ್ ಮದ್ಯದ ಬಾಟಲಿಗಳು ತುಂಬಿದ್ದ ಬಾಕ್ಸ್‌ಗಳು, ಮಹೀಂದ್ರಾ ಪಿಕ್ ಇನ್ಸುಲೇಟರ್ ಹಾಗೂ ವಾರುತಿ ಸ್ವಿಫ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪೈಕಿ ವಿನಯ್ ಎಂಬಾತನ ಮೇಲೆ ಈಗಾಗಲೇ ಕಾರವಾರ ಜಿಲ್ಲೆಯ ಚಿತ್ತಾಕುಲ ಪೊಲೀಸ್ ಠಾಣೆ, ಕಾರವಾರ ಗ್ರಾಮಾಂತರ ಹಾಗೂ ಅಬಕಾರಿ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.