23 ಕಲಾವಿದರಿಗೆ 'ಯಕ್ಷಗಾನ ಕಲಾರಂಗ' ಪ್ರಶಸ್ತಿ

ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮುರಳಿ ಕಡೆಕಾರ್​ ಮಾತನಾಡಿದರು. ಎಂ. ಗಂಗಾಧರ ರಾವ್​, ಎಸ್​.ವಿ. ಭಟ್​, ವಿ.ಜಿ. ಶೆಟ್ಟಿ, ಪ್ರೊ. ಕೆ.ಸದಾಶಿವ ರಾವ್​, ನಾರಾಯಣ ಎಂ. ಹೆಗಡೆ ಉಪಸ್ಥಿತರಿದ್ದರು.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮುರಳಿ ಕಡೆಕಾರ್​ ಮಾತನಾಡಿದರು. ಎಂ. ಗಂಗಾಧರ ರಾವ್​, ಎಸ್​.ವಿ. ಭಟ್​, ವಿ.ಜಿ. ಶೆಟ್ಟಿ, ಪ್ರೊ. ಕೆ.ಸದಾಶಿವ ರಾವ್​, ನಾರಾಯಣ ಎಂ. ಹೆಗಡೆ ಉಪಸ್ಥಿತರಿದ್ದರು.
Published on

ನ.23ರಂದು ಉಡುಪಿಯ ಐವೈಸಿಯಲ್ಲಿ ಪ್ರದಾನ

ಉಡುಪಿ: ಯಕ್ಷಗಾನ ಕಲಾರಂಗದ 2025ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭವು ಸಂಸ್ಥೆಯ ಐವೈಸಿ ಸಭಾಂಗಣದಲ್ಲಿ ನ.23ರಂದು ಸಂಜೆ 4:30ಕ್ಕೆ ನಡೆಯಲಿದ್ದು, 23 ಸಾಧಕರಿಗೆ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದು ಕಾರ್ಯದರ್ಶಿ ಮುರಳಿ ಕಡೆಕಾರ್​ ಮಾಹಿತಿ ನೀಡಿದರು.
ಉಡುಪಿಯ ಪತ್ರಿಕಾ ಭವನದಲ್ಲಿ ಸೋಮವಾರ (ನ.17) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಅನುಗ್ರಹ ಆಶೀರ್ವಚನ ನೀಡಲಿದ್ದಾರೆ. ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಜಿ. ಶಂಕರ್​ ಫ್ಯಾಮಿಲಿ ಟ್ರಸ್ಟ್​ನ ಅಧ್ಯಕ್ಷ ಡಾ. ಜಿ. ಶಂಕರ್​ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕರ್ಣಾಟಕ ಬ್ಯಾಂಕ್​ನ ಆಡಳಿತ ನಿರ್ದೇಶಕ ಎಂ.ರಾಘವೇಂದ್ರ ಭಟ್​ ಶುಭಾಶಂಸನೆ ಮಾಡುವರು. ಸುಪ್ರಭಾತ ಗ್ರೂಪ್​ ಆಫ್​ ಹೋಟೆಲ್​ನ ಕೃಷ್ಣಮೂರ್ತಿ ಮಂಜ ಮಾರಣಕಟ್ಟೆ ಅವರು ಯಕ್ಷ ವಿದ್ಯಾಪೋಷಕ್​ನ 62 ವಿದ್ಯಾರ್ಥಿಗಳಿಗೆ ಸಹಾಯಧನ (ಒಟ್ಟು 7,11,500 ರೂ.) ವಿತರಿಸಲಿದ್ದಾರೆ ಎಂದರು.
ಕಾರ್ಕಳ ಯಕ್ಷರಂಗಾಯಣದ ನಿರ್ದೇಶಕ ಬಿ.ಆರ್​. ವೆಂಕಟರಮಣ, ಬೆಂಗಳೂರು ಟೆಕ್ಸೆಲ್​ ಪ್ರೈ. ಲಿ. ಆಡಳಿತ ನಿರ್ದೇಶಕ ಹರೀಶ್​ ರಾಯಸ್​, ಬೆಂಗಳೂರಿನ ವೈದ್ಯ ಡಾ. ಕಬ್ಯಾಡಿ ಹರಿರಾಂ ಆಚಾರ್ಯ, ಮಂದಾರ್ತಿ ಕೆ.ಎಂ. ಉಡುಪ ಟ್ರಸ್ಟ್​ನ ವಿಶ್ವಸ್ಥ ಕೆ.ಮಹೇಶ್​ ಉಡುಪ, ಬಂಟ್ವಾಳದ ಅಡಕೆ ಪತ್ರಿಕೆಯ ಪ್ರಕಾಶಕ ಡಾ. ಪಡಾರು ರಾಮಕೃಷ್ಣ ಶಾಸ್ತ್ರಿ, ಮಂಗಳೂರಿನ ನಮ್ಮ ಕುಡ್ಲದ ಆಡಳಿತ ನಿರ್ದೇಶಕ ಲೀಲಾಕ್ಷ ಬಿ. ಕರ್ಕೇರ ಪಾಲ್ಗೊಳ್ಳಲಿದ್ದಾರೆ ಎಂದು  ಮುರಳಿ ಕಡೆಕಾರ್​ ತಿಳಿಸಿದರು.

ವಿಶ್ವೇಶ ತೀರ್ಥ ಪ್ರಶಸ್ತಿ

ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್​ ಮಾತನಾಡಿ, ಪ್ರಶಸ್ತಿ ಪುರಸತರಿಗೆ ತಲಾ 20 ಸಾವಿರ ರೂ. ನಗದು ಹಾಗೂ ಸ್ಮರಣಿಕೆ ನೀಡಲಾಗುವುದು. ಅಲ್ಲದೆ, 1 ಲಕ್ಷ ರೂ. ಮೊತ್ತದ ಶ್ರೀ ವಿಶ್ವೇಶ ತೀರ್ಥ ಪ್ರಶಸ್ತಿಯನ್ನು ಬೆಂಗಳೂರಿನ ಯಕ್ಷ ಕಲಾ ಅಕಾಡೆಮಿ ಸಂಸ್ಥೆಗೆ ನೀಡಲಾಗುತ್ತಿದೆ. ನಮ್ಮ ಸಂಸ್ಥೆಯ ಕಾರ್ಯದರ್ಶಿಯಾದ ಮುರಲಿ ಕಡೆಕಾರ್​ ಅವರಿಗೆ ಯಕ್ಷ ಚೇತನ ಪ್ರಶಸ್ತಿ ನೀಡಲಾಗುತ್ತಿದೆ. ಸಮಾರಂಭಕ್ಕೂ ಮೊದಲು ಮಧ್ಯಾಹ್ನ 1:30ರಿಂದ ಬಡಗುತಿಟ್ಟಿನ ಕಲಾವಿದರಿಂದ 'ತಾಮ್ರಧ್ವಜ ಕಾಳಗ' ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದರು.

ಪ್ರಶಸ್ತಿ ಪುರಸ್ಕೃತರ ಮಾಹಿತಿ

 ಸುಬ್ರಹ್ಮಮಣ್ಯ ಚಿಟ್ಟಾಣಿ, ಕಕ್ಕುಂಜೆ ಗೋಪಾಲ ಬಳೆಗಾರ, ಕೊಡೇರಿ ಕೃಷ್ಣ, ಕಲ್ಲಗುಡ್ಡೆ ಲಕ್ಷ್ಮಣ ಪೂಜಾರಿ, ಸೂರನಕೇರಿ ರಾಧಾಕೃಷ್ಣ ಭಟ್​, ಸುರೇಶ್​ ಉಪ್ಪೂರ, ಬದ್ಕಲ್​ಕಟ್ಟೆ ಕೃಷ್ಣಯ್ಯ ಬಿ. ಆಚಾರ್​, ಮನೋಹರ್​ ರಾವ್​ ಕೆ.ಜಿ. ಸೀತೂರು, ಪ್ರಭಾಕರ ಶೆಟ್ಟಿ ಮಡಾಮಕ್ಕಿ, ವಿಷ್ಣು ಮಂಜಪ್ಪ ಆಚಾರಿ ಬಳ್ಕೂರು, ಲಕ್ಷ್ಮೀನಾರಾಯಣ ಸಂಪ, ಸಂಜೀವ ಶೆಟ್ಟಿ ಆಜ್ರೀಹರ, ಸುಣ್ಣಂಬಳ ವಿಶ್ವೇಶ್ವರ ಭಟ್​, ಸುರೇಶ್​ ರಾವ್​ ಬಾರ್ಕೂರು, ಅಪ್ಪಯ್ಯ ಮಣಿಯಾಣಿ, ಕೃಷ್ಣಮೂರ್ತಿ ಉರಾಳ, ರಾಮು ಕೇಶವ ಗೌಡ ಗುಣವಂತೆ, ಕಡಬ ರಾಮಚಂದ್ರ ಪೈ, ಉಮೇಶ ಮೊೃಲಿ ಮೂರುಕಾವೇರಿ, ಶಿವಣ್ನ ಶೆಟ್ಟಿ ಸರಪಾಡಿ, ಮೋಹನ ನಾಯ್ಕ ಕೂಜಳ್ಳಿ, ಬಲಿಪ ವಿಶ್ವೇಶ್ವರ್​ ಭಟ್​, ಮಹಾಬಲ ಭಟ್​ ಭಾಗಮಂಡಲ. 
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಎಸ್​.ವಿ. ಭಟ್​, ವಿ.ಜಿ. ಶೆಟ್ಟಿ, ಕೋಶಾಧಿಕಾರಿ ಪ್ರೊ. ಕೆ.ಸದಾಶಿವ ರಾವ್​, ಸಹ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net