

ಕಾಸರಗೋಡು: ವಿದ್ಯಾನಗರ ಠಾಣೆ ಪೊಲೀಸರು ನಡೆಸಿದ ಆಪರೇಷನ್ ತೂಫಾನ್ ಕಾರ್ಯಾಚರಣೆಯ ಎರಡು ಪ್ರತ್ಯೇಕ ಪ್ರಕರಣದಲ್ಲಿ ಒಟ್ಟು 20.730 ಗ್ರಾಂ ಎಂಡಿಎಂಎ ಮಾದಕ ಪದಾರ್ಥ ವಶಪಡಿಸಿಕೊಂಡುಲ ಮೂವರನ್ನು ಬಂಧಿಸಲಾಗಿದೆ.
ಚೆರ್ಕಳಕ್ಕೆ ಬರುತ್ತಿದ್ದ ಆಲ್ಟೋ ಕಾರು ತಡೆದು ತಪಾಸಣೆ ನಡೆಸಿದಾಗ 2.730 ಗ್ರಾಂ ಎಂಡಿಎಂಎ ಪತ್ತೆಯಾಗಿದ್ದು, ಚೆರ್ಕಳ ಕುಞಿಕ್ಕರ ನಿವಾಸಿ ಉಣ್ಣಿಕೃಷ್ಣನ್ ಪಿ(26) ಎಂಬಾತನನ್ನು ಬಂಧಿಸಿದ್ದಾರೆ. ಸಂಚಾರಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಮುಟ್ಟತ್ತೋಡಿ ಹಿದಾಯತ್ ನಗರದಲ್ಲಿ ಪೊಲೀಸರು ನಡೆಸಿದ ಇನ್ನೊಂದು ಕಾರ್ಯಾಚರಣೆಯಲ್ಲಿ 18 ಗ್ರಾಂ ಎಂಡಿಎಂಎ, ಕಾರು ವಶಪಡಿಸಿಕೊಂಡು ಸಂತೋಷ್ ನಗರ ಕುಞಿಕ್ಕಾನ ನಿವಾಸಿ ಮೊಹಮ್ಮದ್ ಅಫೀದ್(26), ಚೇರ್ಕಳ ತಾಯಲ್ ಹೌಸ್‌ನ ಅಬ್ದುಲ್ ಜಾವದ್ ಎಸ್.(27) ಎಂಬುವರನ್ನು ಬಂಧಿಸಲಾಗಿದೆ.