15 ದಿನದಲ್ಲಿ 10 ಟನ್ ಕಸ ಸಂಗ್ರಹ..!

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾವಾಭಿವದ್ಧಿ ಯೋಜನೆ ಹೆಬ್ರಿ ತಾಲೂಕಿನ ಚಾರ ಬೆಳಂಜೆ ಶೌರ್ಯ ವಿಪತ್ತು ಘಟಕ ಸದಸ್ಯರು ತ್ಯಾಜ್ಯ ಸಂಗ್ರಹದಲ್ಲಿ ತೊಡಗಿಸಿಕೊಂಡಿರುವುದು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾವಾಭಿವದ್ಧಿ ಯೋಜನೆ ಹೆಬ್ರಿ ತಾಲೂಕಿನ ಚಾರ ಬೆಳಂಜೆ ಶೌರ್ಯ ವಿಪತ್ತು ಘಟಕ ಸದಸ್ಯರು ತ್ಯಾಜ್ಯ ಸಂಗ್ರಹದಲ್ಲಿ ತೊಡಗಿಸಿಕೊಂಡಿರುವುದು.
Published on

ನರೇಂದ್ರಎಸ್ ಮರಸಣಿಗೆ ಹೆಬ್ರಿ

ರಸ್ತೆಇಕ್ಕೆಲಗಳಲ್ಲಿ,ಪರಿಸರದಎಲ್ಲೆಂದರಲ್ಲಿ ಪ್ಲಾಸ್ಟಿಕ್ಬಾಟಲಿಗಳು,ಕವರ್‌ಗಳು,ಮದ್ಯದಬಾಟಲಿಗಳ ಸಹಿತ ತ್ಯಾಜ್ಯಗಳನ್ನುಎಸೆದು ಪರಿಸರಕ್ಕೆ ಹಾನಿಯುಂಟುಮಾಡುತ್ತ,ಪರಿಸರದಅಂದಗೆಡಿಸುತ್ತ ಅನಾಗರಿಕ ವರ್ತನೆತೋರುವ ನಾಗರಿಕರ ಕಣ್ತೆರೆಸುವಕೆಸವನ್ನು ಶೌರ್ಯ ವಿಪತ್ತ ಘಟಕಸದಸ್ಯರು ಮಾಡಿ ತೋರಿಸಿದ್ದಾರೆ.ನಿರಂತರವಾಗಿಹದಿನೈದು ದಿನಗಳ ಕಾಲ ಸ್ವಚ್ಛತಾಕಾರ್ಯದಲ್ಲಿ ತೊಡಗಿಸಿಕೊಂಡುಬರೋಬ್ಬರಿ 10ಟನ್ತ್ಯಾಜ್ಯ ಸಂಗ್ರಹಿಸಿ ಪರಿಸರಕಾಳಜಿ ಮೆರೆದಿದ್ದಾರೆ.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ಹೆಬ್ರಿ ತಾಲೂಕಿನ ಚಾರಬೆಳಂಜೆ ಶೌರ್ಯವಿಪತ್ತು ಘಟಕ ಸದಸ್ಯರು ಹೆಬ್ರಿಯ ಮೂರು ರಸ್ತೆಯಸರ್ಕಲ್‌ನಿಂದ ತೆಂಕೋಲದ ತನಕ 15ದಿನಗಳಕಾಲ ಸ್ವಚ್ಛತಾ ಕಾರ್ಯ ನಡೆಸಿದರು.ರಸ್ತೆಯಇಕ್ಕೆಲಗಳಲ್ಲಿ ತುಂಬಿ ತುಳುಕಾಡುತ್ತಿದ್ದತ್ಯಾಜ್ಯವನ್ನು ತೆರವು ಮಾಡಿಪರಿಸರ ಕಾಳಜಿ ಮೆರೆದಿದ್ದಾರೆ.ಹದಿನೈದುದಿನಗಳಲ್ಲಿ 10ಟನ್ಕಸ ಸಂಗ್ರಹಿಸಿದ್ದಾರೆ.ಘಟಕದಮೇಲ್ವಿಚಾರಕಿ ರೇವತಿ,ಅಧ್ಯಕ್ಷಚಂದ್ರ ನಾಯ್ಕ,ಪ್ರತಿನಿಧಿಲತಾ ಶೆಟ್ಟಿ ಮಾರ್ಗದರ್ಶನದಲ್ಲಿಸದಸ್ಯರೆಲ್ಲ ಸೇರಿ ಸ್ವಚ್ಛತಾಕಾರ್ಯದಲ್ಲಿ ಶ್ರಮಿಸಿದ್ದಾರೆ.

ಕಾರ್ಮಿಕವರ್ಗದಿಂದ ಶ್ರಮದಾನ

ಈತಂಡದ ಬಹುತೇಕ ಸದಸ್ಯರುಕಾರ್ಮಿಕರಾಗಿದ್ದು,ಬೆಳಗ್ಗೆಯಿಂದಸಂಜೆ ವರೆಗೆ ದುಡಿಯುತ್ತಾರೆ.ಸಂಜೆಕೆಲಸದಿಂದ ವಾಪಸ್ ಬಂದ ಮೇಲೆ 5.30ರಿಂದ6.30ರವಗೆಸ್ವಚ್ಛ ಸೇನಾನಿಗಳಂತೆ ತ್ಯಾಜ್ಯಸಂಗ್ರಹದಲ್ಲಿ ತೊಡಗಿಸಿಕೊಳ್ಳುತ್ತಿದ್ದರು.ಇವರಪರಿಸರ ಕಾಳಜಿ,ಕೆಸಲದಬದ್ಧತೆಗೆ ಸಾರ್ವಜನಿಕ ವಲಯದಲ್ಲಿಪ್ರಶಂಸೆ ವ್ಯಕ್ತವಾಗಿದೆ.

ಮದ್ಯದಬಾಟಲಿಗಳೇ ಹೆಚ್ಚು

ಸಂಗ್ರಹವಾಗಿರುವಟನ್‌ಗಟ್ಟಲೇ ತ್ಯಾಜ್ಯಗಳಲ್ಲಿಮದ್ಯದ ಬಾಟಲಿಗಳು,ನೀರಿನಬಾಟಲಿಗಳೇ ಹೆಚ್ಚಿನ ಪ್ರವಾಣದಲ್ಲಿದ್ದವು.ಇನ್ನುಮುಂದಾದರೂ ಸಾರ್ವಜನಿಕರುತ್ಯಾಜ್ಯವನ್ನು ಎಲ್ಲೆಂದರಲ್ಲಿಎಸೆಯದೆ ಪಂಚಾಯಿತಿಯ ತ್ಯಾಜ್ಯಟಕಕ್ಕೆ ನೀಡಬೇಕು.ನಮ್ಮೂರುಸುಂದರವಾಗಬೇಕಾದರೆ ಎಲ್ಲರೂಸಹಕಾರ ನೀಡಬೇಕೆಂದು ತಂಡ ಮನವಿವಾಡಿದೆ.

12 ಬಸ್ನಿಲ್ದಾಣಗಳಲ್ಲಿ ಸ್ವಚ್ಛತೆ

ಚಾರದಿಂದಕುಚ್ಚೂರು ವ್ಯಾಪ್ತಿಯ ಸುವಾರು12ಬಸ್ನಿಲ್ದಾಣಗಳನ್ನು ಸ್ವಚ್ಛಗೊಳಿಸಲಾಗಿದೆ.ಸಾರ್ವಜನಿಕಸ್ಥಳ,ದೇವಸ್ಥಾನ,ಪ್ರಾಥಮಿಕಆರೋಗ್ಯ ಕೇಂದ್ರ,ಅಂಗನವಾಡಿಕೇಂದ್ರ,ಶಾಲೆಗಳನ್ನುಸ್ವಚ್ಛಗೊಳಿಸಲಾಗಿದೆ.ಶೌರ್ಯವಿಪತ್ತು ತಂಡವು ಸ್ವಚ್ಛತಾಕಾರ್ಯದೊಂದಿಗೆ ಕೈತೋಟ ನಿರ್ವಾಣ,ಪ್ರಾಕೃತಿಕವಿಕೋಪ ಸಂದರ್ಭದಲ್ಲಿ ಯೋಧರಂತೆಕೆಲಸ ವಾಡುತ್ತದೆ.

ಸಣ್ಣ ಹಳ್ಳಿಯಲ್ಲಿ ಇಷ್ಟು ದೊಡ್ಡ ಪ್ರವಾಣದಲ್ಲಿ ಕಸ ಸಂಗ್ರಹವಾಗಿರುವುದು ದುರಂತವೇ ಸರಿ. ಸಂಗ್ರಹಿಸಿದ ತ್ಯಾಜ್ಯದಲ್ಲಿ ಪ್ಲಾಸ್ಟಿಕ್ ಹಾಗೂ ಮದ್ಯದ ಬಾಟಲಿಗಳೇ ಹೆಚ್ಚಿನ ಪ್ರಮಾಣದಲ್ಲಿದ್ದವು. ಇನ್ನಾದರೂ ಎಲ್ಲೆಂದರಲ್ಲಿ ಕಸ ಎಸೆಯಬೇಡಿ. ಊರನ್ನು ತ್ಯಾಜ್ಯಮುಕ್ತ ವಾಡೋಣ.

ಚಾರ ಬೇಳಂಜೆಯಲ್ಲಿ ಸ್ವಚ್ಛತೆಗಾಗಿ ಗ್ರಾಮಾಭಿವೃದ್ಧಿ ಯೋಜನೆಯವರು ದೊಡ್ಡಮಟ್ಟದ ಕೊಡುಗೆ ನೀಡಿದ್ದಾರೆ. ಸಾರ್ವಜನಿಕರು ಇವರ ಸೇವೆಯನ್ನು ಅರಿತು ಇನ್ನಾದರೂ ಎಲ್ಲೆಂದರಲ್ಲಿ ಕಸ ಎಸೆಯುವುದಕ್ಕೆ ಕಡಿವಾಣ ಹಾಕಬೇಕು. ಊರಿನ ಸ್ವಚ್ಛತೆಗಾಗಿ ದುಡಿದ ಸೇನಾನಿಗಳನ್ನು ಗ್ರಾಮಸಭೆಯಲ್ಲಿ ಗೌರವಿಸಿರುವುದು ಅವರಿಗೆ ನೀಡಿದ ದೊಡ್ಡ ಗೌರವವಾಗಿದೆ. ಎಲ್ಲರೂ ಸಹಕಾರ ನೀಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net