ಗಾಂಜಾ ಅಪರಾಧಿಗೆ 1 ವರ್ಷ ಕಠಿಣ ಜೈಲು

ವಿನ್ಸೆಂಟ್ ಡಿಸೋಜ
ವಿನ್ಸೆಂಟ್ ಡಿಸೋಜ
Published on
ಕಾಸರಗೋಡು: ಮನೆಯಲ್ಲಿ ಹಾಸಿಗೆ ಕೆಳಗೆ ಬಚ್ಚಿಟ್ಟಿದ್ದ 3.800 ಕೆಜಿ ಗಾಂಜಾ ಪ್ರಕರಣದಲ್ಲಿ ಅಪರಾಧಿಗೆ ಕಠಿಣ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ. ಮಂಜೇಶ್ವರ ಮೀಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿನ್ಸೆಂಟ್ ಡಿಸೋಜ(38)ಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರಾಮು ರಮೇಶ್ ಚಂದ್ರಭಾನು ಒಂದು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 20,000 ರೂ. ದಂಡ ವಿಧಿಸಿದ್ದಾರೆ.
ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿಯಾಗಿ ಎರಡೂವರೆ ತಿಂಗಳು ಶಿಕ್ಷೆ ಅನುಭವಿಸಲು ತೀರ್ಪಿನಲ್ಲಿ ತಿಳಿಸಲಾಗಿದೆ. 2020ರ ಜೂನ್ 15ರಂದು ಮಂಜೇಶ್ವರ ಪೊಲೀಸರು ವಿನ್ಸೆಂಟ್ ಡಿಸೋಜ ಮನೆಗೆ ದಾಳಿ ನಡೆಸಿ ಹಾಸಿಗೆಯ ಕೆಳಗೆ ಬಚ್ಚಿಟ್ಟಿದ್ದ 3.800 ಕೆಜಿ ಗಾಂಜಾ ಪತ್ತೆ ಮಾಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net