ಉಡುಪಿಯಲ್ಲಿ ವಾರ್ಲಿ ಕಲೆ ಕಾರ್ಯಾಗಾರ ಉದ್ಘಾಟನೆ

Inauguration by ar Sampreeth Rao_Warli workshop
Published on

ಉಡುಪಿ: ಭಾರತದ ಸಂಸತಿಯ ಮೂಲ ಜನಪದ. ಜನಪದವೆಂದರೆ ಅದು ನಮ್ಮತನ. ಅದು ಕಲೆಯೇ ಆಗಿರಬಹುದು, ಪರಂಪರೆಯೇ ಆಗಿರಬಹುದು. ಅದನ್ನು ಉಳಿಸುವ ಕಾರ್ಯ ಆಗಲೇಬೇಕು ಎಂದು ಸ್ಟುಡಿಯೋ ನೆರಳು ಸಂಸ್ಥೆಯ ಆರ್ಕಿಟೆಕ್ಟ್ ಸಂಪ್ರೀತ್ ರಾವ್ ಆಶಯ ವ್ಯಕ್ತಪಡಿಸಿದರು.


ಉಡುಪಿಯ ಬಡಗುಪೇಟೆಯ ಗ್ಯಾಲರಿಯಲ್ಲಿ ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ 4 ದಿನಗಳ ಜನಪದ ದೇಸಿ ಕಲೆಯ ಸರಣಿ ಕಾರ್ಯಾಗಾರದ 8ನೇ ಆವೃತ್ತಿ ಉದ್ಘಾಟಿಸಿ ಮಾತನಾಡಿದರು.


ಪಾಶ್ಚಿಮಾತ್ಯರ ಪ್ರಭಾವದಿಂದ ದೇಸಿ ಸಂಸತಿ, ಕಲೆಗೆ ಧಕ್ಕೆಯಾಗುತ್ತಿದೆ. ಅದರ ರಕ್ಷಣೆ ಅಸಾಧ್ಯ ಎಂಬ ಹೊತ್ತಿನಲ್ಲಿ ಡಾ. ಜನಾರ್ದನ ರಾವ್ ಅವರು ದೇಸಿ ಕಲೆಗಳನ್ನು ರಸಲು 20 ವರ್ಷದಿಂದ ಶ್ರಮ ವಹಿಸಿದ್ದಾರೆ. ಇಂತಹ ಸರಣಿ ಕಾರ್ಯಾಗಾರದ ಮೂಲಕ ಯಾವುದೇ ಲಾಪೇೆ ಇಲ್ಲದೆ ನಮ್ಮ ಕಲೆಯನ್ನು ಉಳಿಸುತ್ತಿರುವ ರೀತಿ ಅನನ್ಯ, ದೇಶಕ್ಕೆ ಅವರ ಕೊಡುಗೆ ಅಪಾರ ಎಂದರು.

ಚಿತ್ರಕಲಾ ಮಂದಿರ ಕಲಾಶಾಲೆಯ ನಿರ್ದೇಶಕ ಡಾ. ನಿರಂಜನ್ ಯು.ಸಿ. ಮಾತನಾಡಿ, 21ನೇ ಶತಮಾನದಲ್ಲಿ ದೇಶ ಜಾಗತಿಕವಾಗಿ ನಾಗಾಲೋಟದಲ್ಲಿದೆ. ಇಂತಹ ಸಂದರ್ಭದಲ್ಲೂ ದೇಸಿ ಜನಪದ ಕಲೆಗಳನ್ನು ಉಳಿಸುವುದನ್ನೇ ಕಾಯಕ ಮಾಡಿಕೊಂಡಿರುವ ಡಾ. ಜನಾರ್ದನ್ ಅವರ ಕಾರ್ಯ ಮಾದರಿಯಾಗಿದೆ ಎಂದರು.
ಭಾವನಾ ಫೌಂಡೇಷನ್ನ ನಿರ್ದೇಶಕ ಹಾವಂಜೆ ಮಂಜುನಾಥಯ್ಯ ಉಪಸ್ಥಿತರಿದ್ದರು. ಮಹಾರಾಷ್ಟ್ರದ "ವಾರ್ಲಿ' ಕಲೆಯ ಖ್ಯಾತ ಕಲಾವಿದೆಯರಾದ ಮೀನಾ ವಾಯಡಾ ಹಾಗೂ ನಳಿನಿ ಕಲ್ಲಂಗಡ್ ಅವರು ಕಾರ್ಯಾಗಾರದಲ್ಲಿ 20ಕ್ಕೂ ಹೆಚ್ಚು ಶಿಬಿರಾರ್ಥಿಗಳಿಗೆ ವಾರ್ಲಿ ಕಲೆ ಚಿತ್ರಿಸುವುದು ಹೇಗೆಂಬ ಕುರಿತು ತರಬೇತಿ ನೀಡಿದರು.

ಡಾ. ಜನಾರ್ದನ್ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ಥಳಿಯವಾಗಿ ಲಭ್ಯವಾಗುವ ಸೆಗಣಿ, ಕೆಂಡದಿಂದ ತಯಾರಿಸಿದ ಕಪು$್ಪಬಣ್ಣ, ಅಕ್ಕಿಹಿಟ್ಟು ಹಾಗೂ ಗೈರು (ಕೆಂಪುಮಣ್ಣು) ಬಳಸಿ ವಾರ್ಲಿ ಚಿತ್ರ ಬಿಡಿಸಲಾಗುತ್ತದೆ. ಈ ಕಾರ್ಯಾಗಾರದಲ್ಲಿ ಹೊಸ ಧಾನ್ಯ ತರುವ ಸಂದರ್ಭದ "ನಯಾಧಾನ್' ಹಾಗೂ ಮದುವೆ ಇನ್ನಿತರ ಸಂಭ್ರಮದ ಕಾರ್ಯಕ್ರಮದ ಸಂದರ್ಭದಲ್ಲಿ ಅಲಂಕಾರಿಕವಾಗಿ ಬಳಸುವ "ಚೌಕ್ ಚಿತ್ರ' ರಚಿಸಿವುದು ಹೇಗೆಂದು ಕಲಿಸಿಕೊಡಲಾಗುವುದು. ನಶಸಿ ಹೋಗುತ್ತಿರುವ ನಮ್ಮ ಭಾರತೀಯ ಕಲೆಯನ್ನು ಉಳಿಸುವುದೇ ಈ ಕಾರ್ಯಾಗಾರದ ಉದ್ದೇಶವಾಗಿದೆ. ಕಲೆಯನ್ನು ಕಲಿತು, ಇತರರಿಗೂ ತಾವು ಈ ಕಲೆಯನ್ನು ಪರಿಚಯಿಸಿದರೆ ಕಾರ್ಯಾಗಾರದ ಉದ್ದೇಶಕ್ಕೆ ಅರ್ಥ ಬರುತ್ತದೆ ಎಂದರು.

ಕಾರ್ಯಾಗಾರದಲ್ಲಿ ಡಾ. ನಿರಂಜನ್ ಯು.ಸಿ. ಮಾತನಾಡಿದರು. ಸಂಪ್ರೀತ್ ರಾವ್, ಹಾವಂಜೆ ಮಂಜುನಾಥಯ್ಯ, ಕಲಾವಿದೆಯರಾದ ಮೀನಾ ವಾಯಡಾ, ನಳಿನಿ ಕಲ್ಲಂಗಡ್, ಡಾ. ಜನಾರ್ದನ್ ರಾವ್ ಇದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net