ಜುಲೈ 20ಕ್ಕೆ ಉಡುಪಿ ಪ್ರವಾಸೋದ್ಯಮ ವಿಚಾರಗೋಷ್ಠಿ

udp-pravasa
Published on

ಉಡುಪಿ: ಉಡುಪಿ ಚೇಂಬರ್​ ಆಫ್​ ಕಾಮರ್ಸ್​ ಆ್ಯಂಡ್​ ಇಂಡಸ್ಟ್ರಿ ವತಿಯಿಂದ ಜುಲೈ 20ರಂದು ಹೋಟೆಲ್​ ಕಿದಿಯೂರು- ಮಾಧವಕೃಷ್ಣ ಸಭಾಭವನದಲ್ಲಿ ಬೆಳಗ್ಗೆ 10 ರಿಂದ ಅಪರಾಹ್ನ 1 ಗಂಟೆ ತನಕ ಉಡುಪಿ ಪ್ರವಾಸೋದ್ಯಮದ ಕುರಿತು 'ಉಡುಪಿ ಪ್ರವಾಸೋದ್ಯಮ : ನಿನ್ನೆ, ಇಂದು ಮತ್ತು ನಾಳೆ' ಎಂಬ ವಿಚಾರಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಅಮ್ಮುಂಜೆ ಪ್ರಭಾಕರ್​ ನಾಯಕ್​ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಳಗ್ಗೆ 10.30ಕ್ಕೆ ಶಾಸಕ ಯಶ್​ಪಾಲ್​ ಆನಂದ್​ ಸುವರ್ಣ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ವಿ. ಸುನಿಲ್​ ಕುಮಾರ್​ ಹಾಗೂ ಶಾಸಕರಾದ ಗುರ್ಮೆ ಸುರೇಶ್​ ಶೆಟ್ಟಿ , ಗುರುರಾಜ್​ ಗಂಟಿಹೊಳೆ ಮತ್ತು ಕಿರಣ್​ ಕುಮಾರ್​ ಕೊಡ್ಗಿ ಭಾಗವಹಿಸಲಿದ್ದು, ಕ್ಷೇತ್ರದ ಪ್ರವಾಸೋದ್ಯಮ ಬೆಳವಣಿಗೆ ಕುರಿತು ಮಾತನಾಡಲಿದ್ದಾರೆ. ಉಡುಪಿ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾ ಕುಮಾರಿ, ಮಾಜಿ ಶಾಸಕ ಹಾಗೂ ಜಿಲ್ಲಾ ಆಟೋ ಮತ್ತು ಟ್ಯಾಕ್ಸಿ ಅಸೋಸಿಯೇಷನ್​ನ ಗೌರವ ಅಧ್ಯಕ್ಷ ಕೆ.ರಘುಪತಿ ಭಟ್​, ಕರಾವಳಿ ಪ್ರವಾಸೋದ್ಯಮ ಸಂಘಟನೆ ಅಧ್ಯಕ್ಷ- ಮನೋಹರ್​ ಎಸ್​.ಶೆಟ್ಟಿ, ಮಣಿಪಾಲ ಆಸ್ಪತ್ರೆಯ ಡಾ. ಕಿರಣ್​ ಆಚಾರ್ಯ, ಜಿಲ್ಲಾ ಅಟೋಮೋಬೈಲ್​ ಅಸೊಸಿಯೇಷನ್​ ಪ್ರತಿನಿಧಿ- ಪ್ರಸಾದ್​ ರಾಜ್​ ಕಾಂಚನ್​, ಉಡುಪಿ ಟೂರಿಸಂ ಸಹಾಯಕ ನಿರ್ದೇಶಕ - ಕುಮಾರ್​ ಸಿ.ಯು. ಅಭಿಪ್ರಾಯ ಮಂಡಿಸಲಿದ್ದಾರೆ ಎಂದರು.

ಉಡುಪಿ ಜಿಲ್ಲಾ ಟೂರ್ಸ್​ & ಟ್ರಾವೆಲ್ಸ್​ ಸಂಘಟನೆಯ ಅಧ್ಯಕ್ಷ ಮರವಂತೆ ನಾಗರಾಜ ಹೆಬ್ಬಾರ್​ ಮಾತನಾಡಿ, ಯೂನಿಯನ್​ ಬ್ಯಾಂಕ್​ ಅಧಿಕಾರಿಗಳು ಜಿಲ್ಲೆಯ ಪ್ರವಾಸೋದ್ಯಮದ ಅರ್ಹ ಚಟುವಟಿಕೆಗಳಿಗೆ ಸಾಲ ಸೌಲಭ್ಯಗಳನ್ನು ನೀಡುವ ಕುರಿತು ಮಾಹಿತಿ ನೀಡುವರು. ವಿಚಾರಗೋಷ್ಠಿಯಲ್ಲಿ ಉಡುಪಿ ಪ್ರವಾಸೋದ್ಯಮದ ಪ್ರಸ್ತುತ ಪರಿಸ್ಥಿತಿ, ಅವಕಾಶಗಳು, ಸಮಸ್ಯೆಗಳು, ನಿರೀಕ್ಷೆಗಳು ಹಾಗೂ ಬೆಳವಣಿಗೆ ಕುರಿತು ಪ್ರವಾಸೋದ್ಯಮದ ಪಾಲುದಾರರು, ಸಂಘಟಕರು, ಅನುಭವಿಗಳು ಮಾಹಿತಿ ನೀಡಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಚೇಂಬರ್​ ಉಪಾಧ್ಯಕ್ಷ ಕೆ.ನಟರಾಜ್​ ಪ್ರಭು, ಗೌರವ ಕಾರ್ಯದರ್ಶಿ ಲಕ್ಷಿ$್ಮಕಾಂತ್​ ಬೆಸ್ಕೂರ್​, ನಿರ್ದೇಶಕ ಡಾ. ವಿಜಯೇಂದ್ರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net