ಪೂಜೆ ನೆಪದಲ್ಲಿ 7.36 ಲಕ್ಷ ರೂ. ಲೂಟಿ

Gold Theft
ಸಾಂದರ್ಭಿಕ ಚಿತ್ರ
Published on

ಉಡುಪಿ: ನಿಮ್ಮ ಮನೆಯಲ್ಲಿ ಯಾರೊ ಮಾಟ ಮಂತ್ರ ಮಾಡಿದ್ದಾರೆ. ಅದನ್ನು ಸರಿಪಡಿಸಬೇಕು ಎಂದು ಮಹಿಳೆಯೊಬ್ಬರನ್ನು ಪೂಜೆಯ ನೆಪದಲ್ಲಿ ವಂಚಿಸಿ ಲಕ್ಷಾಂತರ ಮೌಲ್ಯದ ಚಿನ್ನ, ನಗದು ದೋಚಲಾಗಿದೆ. ನಿಟ್ಟೂರು ರಾಜೀವ ನಗರದ ನಿವಾಸಿ ಲಕ್ಷ್ಮೀ ಹಣ ಕಳೆದುಕೊಂಡ ಮಹಿಳೆ. ಮಾ.5ರಂದು 30 ವರ್ಷದ ಅಪರಿಚಿತ ಮಹಿಳೆ ಲಕ್ಷ್ಮೀ ಅವರ ಮನೆಗೆ ಆಗಮಿಸಿ, ನಿಮ್ಮ ಮನೆಯಲ್ಲಿ ಮಾಟ ಮಾಡಿದ್ದಾರೆ. ಕಣ್ಣು ದೃಷ್ಟಿ ಆಗಿದೆ, ಇದಕ್ಕೆ ಲಕ್ಷ್ಮೀ ಪೂಜೆ ಆಗಬೇಕು ಎಂದು ಹೇಳಿದ್ದರು. ಪೂಜೆಯ ಸಲುವಾಗಿ ಮನೆಯಲ್ಲಿದ್ದ ಎಲ್ಲ ಚಿನ್ನಾಭರಣ ಹಾಗೂ ಹಣವನ್ನು ತರಲು ಹೇಳಿದ್ದನ್ನು ನಂಬಿದ ಮನೆಯಾಕೆ ಎಲ್ಲ ಚಿನ್ನಾಭರಣ, 15 ಸಾವಿರ ರೂಪಾಯಿ ಹಣವನ್ನು ಬಾಕ್ಸ್‌ನಲ್ಲಿ ಹಾಕಿ ಕೊಟ್ಟಿದ್ದಾರೆ. ಅಪರಿಚಿತ ಮಹಿಳೆ ಪೂಜೆ ಮಾಡಿ ಹೋದ ಬಳಿಕ ಬಾಕ್ಸ್ ನೋಡಿದಾಗ ಚಿನ್ನಾಭರಣ ಮತ್ತು ಹಣ ಇರಲಿಲ್ಲ. ಒಟ್ಟು 7.36 ಲಕ್ಷ ರೂ ಮೌಲ್ಯದ ಚಿನ್ನದ ಮತ್ತು 15 ಸಾವಿರ ರೂ. ನಗದನ್ನು ಮಹಿಳೆ ದೋಚಿದ್ದಾಳೆ ಎಂದು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net