ತನುಶ್ರೀ ಮುಡಿಗೆ ಮತ್ತೊಂದು ವಿಶ್ವ ದಾಖಲೆ; 43‌ ನಿಮಿಷದಲ್ಲಿ 245 ಯೋಗಾಸನ ಭಂಗಿ !

20210815_161008
Published on

ಉಡುಪಿ: ನಲವತ್ತು ಮೂರು ನಿಮಿಷ 18 ಸೆಕೆಂಡ್ ನಲ್ಲಿ 245 ಯೋಗಾಸನಗಳನ್ನು ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ನಲ್ಲಿ ತನುಶ್ರಿ ಪಿತ್ರೋಡಿ ಮತ್ತೊಂದು ವಿಶ್ವ ದಾಖಲೆ ಬರೆದಿದ್ದಾರೆ.

ಭಾನುವಾರ ಕೃಷ್ಣಮಠ ರಾಜಾಂಗಣದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ತನುಶ್ರಿ ನ ಯೋಗಾಸನ ಕ್ಲಿಷ್ಟಕರ ಭಂಗಿಯನ್ನು ಪ್ರದರ್ಶಿಸಿದರು.
ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಏಷ್ಯದ ಮುಖ್ಯಸ್ಥ ಮನೀಶ್ ಬಿಶ್ನೋಯ್ ಉಪಸ್ಥಿತಿಯಲ್ಲಿ ಈ ಪ್ರದರ್ಶನ ನಡೆಯಿತು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ನಾನು ಇಲ್ಲಿವರೆಗೆ ಎರಡು ಸಾವಿರ ದಾಖಲೆ ನೋಡಿದ್ದೇನೆ ತನುಶ್ರಿ ಈ ದಾಖಲೆ ಅದ್ಬುತ ಎಂದು ಬಣ್ಣಿಸಿದ್ದಾರೆ. ತನುಶ್ರೀ ಅವರ ಈ ದಾಖಲೆ ಮುಂದೆ ಯಾರಿಂದಲೂ ಬ್ರೇಕ್ ಮಾಡಲು ಸಾಧ್ಯವಿಲ್ಲ. ಇದು ನೂರು ದಾಖಲೆಗೆ ಸಮವಾಗಿದೆ ಎಂದು ಶ್ಲಾಘಿಸಿದರು.

ಈಗಾಗಲೆ ಹಲವು ದಾಖಲೆಗಳ ಯೋಗ ಪ್ರದರ್ಶನ ಮಾಡಿರುವ ತನುಶ್ರೀ ಕಿರಿಯ ವಯಸ್ಸಿನಲ್ಲಿಯೇ ವಿಶಿಷ್ಟ ಯೋಗ ಸಾಧಕಿಯಾಗಿ ಗುರುತಿಸಿಕೊಂಡಿದ್ದಾರೆ.
ಉದ್ಯಾವರ ಪಿತ್ರೋಡಿ ಉದಯ್ ಕುಮಾರ್ ಮತ್ತು ಸಂಧ್ಯಾ ದಂಪತಿಯ ಪುತ್ರಿ ತನುಶ್ರೀ ಉಡುಪಿಯ ಸೇಂಟ್ ಸಿಸಿಲಿಯ ಕನ್ನಡ ಮಾಧ್ಯಮ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net