ಜ್ಞಾನ ದೇಗುಲಗಳ ರಕ್ಷಣೆ ನಮ್ಮ ಹೊಣೆ...

School Lead
Published on

ನಿರಂಜನ ಆಚಾರ್ಯ ಅನಿಸಿಕೆ

ಶಾಲಾ ಪ್ರಾರಂಭೋತ್ಸವ, ಕೊಠಡಿ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಇಂದಿನ ಮಕ್ಕಳನ್ನು ಭವಿಷ್ಯದಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಶಾಲೆ ಹಾಗೂ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ಹೀಗಾಗಿ ಶತಮಾನದ ಹೊಸ್ತಿಲಲ್ಲಿರುವ ಇಂತಹ ಜ್ಞಾನ ದೇಗುಲಗಳನ್ನು ಉಳಿಸಿ-ಬೆಳೆಸುವ ಹೊಣೆ ನಮ್ಮೆಲ್ಲರದ್ದಾಗಿದೆ ಎಂದು ಕೆನರಾ ಬ್ಯಾಂಕ್​ನ ಉಡುಪಿ ರೀಜನಲ್​ ಮೆನೇಜರ್​ ನಿರಂಜನ ಆಚಾರ್ಯ ಹೇಳಿದರು.

School 3
ಉಡುಪಿಯ ಕಾಡಬೆಟ್ಟುವಿನಲ್ಲಿರುವ ಟಿ.ಎ. ಪೈ ಮಾಡರ್ನ್​ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂನ್​ 2ರಂದು ಶಾಲಾ ಪ್ರಾರಂಭೋತ್ಸವ ಹಾಗೂ ಕೆನರಾ ಬ್ಯಾಂಕ್​ ವತಿಯಿಂದ ನಿರ್ಮಿಸಿರುವ ಶಾಲಾ ಸಿಬ್ಬಂದಿಯ ಕೊಠಡಿ ಉದ್ಘಾಟಿಸಿ ಮಾತನಾಡಿದರು.

ಕೆನರಾ ಬ್ಯಾಂಕ್​ನ ಬ್ರಹ್ಮಗಿರಿ ಶಾಖೆಯ ಮೆನೇಜರ್​ ಸೌಮ್ಯಾ ರಾವ್​, ನಗರಸಭಾ ಸದಸ್ಯೆ ರಶ್ಮಿ ಚಿತ್ತರಂಜನ ಭಟ್​, ಆಡಳಿತ ಮಂಡಳಿ ಅಧ್ಯಕ್ಷ ಎಚ್​.ಆರ್​. ಶೆಣೈ, ಸದಸ್ಯ ರಮೇಶ ರಾವ್​, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾರಾಯಣ ಭಂಡಾರಿ, ಉಪಾಧ್ಯಕ್ಷರಾದ ಕಲ್ಯಾಣಿ ಪೈ, ಶಿವಪ್ರಸಾದ, ಸಂಘದ ಮಾಜಿ ಕಾರ್ಯದರ್ಶಿ ಸತೀಶ ಭಂಡಾರಿ, ಮುಖ್ಯೋಪಾಧ್ಯಾಯಿನಿ ಸುಲೋಚನಾ, ಶಿಕ್ಷಕರು, ಮಕ್ಕಳು ಉಪಸ್ಥಿತರಿದ್ದರು.

School 2
ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಅವರು ತನ್ನ ಪಾಲಕರ ಸ್ಮರಣಾರ್ಥ ಪುಷ್ಪಾನಂದ ಫೌಂಡೇಶನ್​ ವತಿಯಿಂದ ನೀಡಿದ್ದ ಸಿಹಿತಿಂಡಿಯನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಶಿಕ್ಷಕಿ ಸೌದಾಮಿನಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net