ಆ.14ರಿಂದ ಉಡುಪಿ ಕೃಷ್ಣಜನ್ಮಾಷ್ಟಮಿ ಅಷ್ಟದಿನೋತ್ಸವ

udupi krishna
Published on

ಉಡುಪಿ: ಕೃಷ್ಣ ಮಠದಲ್ಲಿ ಕೃಷ್ಣ ಜನ್ಮಾಷ್ಟಮಿ ಆ.19ರಂದು ಜರಗಲಿದ್ದು, ಈ ಪ್ರಯುಕ್ತ ಆ.14ರಿಂದ 21ರವರೆಗೆ ಪರ್ಯಾಯ ಕೃಷ್ಣಾಪುರ ಮಠದ ವತಿಯಿಂದ ಅಷ್ಟದಿನೋತ್ಸವ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.

14ರಂದು ಸಾಯಂಕಾಲ 5.30ಕ್ಕೆ ಪರ್ಯಾಯ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಬ್ರಹ್ಮಣ್ಯ ಆಚಾರ್ಯ ಅವರಿಂದ ಪ್ರವಚನ ಹಾಗೂ ಪೂಜಾ ಸಾತನೂರು ಅವರಿಂದ ಭರತನಾಟ್ಯ ಜರಗಲಿದೆ.

15ರಂದು ಸಾಯಂಕಾಲ 7ಕ್ಕೆ ಎಲ್.ಆರ್. ವಿಜಯರಂಗ ಅವರಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ, 16ರಂದು 7ಕ್ಕೆ ಸ್ವಾತಿ ಗೌಡ ಮತ್ತು ತಂಡದಿಂದ ಕೃಷ್ಣಾರ್ಪಣಂ ನೃತ್ಯರೂಪಕ, 17ರಂದು 7ಕ್ಕೆ ತೇಜಸ್ವಿನಿ ವರ್ಣೇಕರ್ ಅವರಿಂದ ಹಿಂದುಸ್ತಾನಿಶಾಸ್ತ್ರೀಯ ಸಂಗೀತ, 18ರಂದು 7ಕ್ಕೆ ರುಕ್ಮಿಣಿ ಹಂದೆ ಅವರಿಂದ ಕೃಷ್ಣಾಮೃತಂ ಹರಿಕಥೆ, 19ರಂದು ಜಿಲ್ಲಾಡಳಿತ ಕೃಷ್ಣ ಜಯಂತಿ, 20ರಂದು ಹುಲಿವೇಷ ಸ್ಪರ್ಧೆ, 21ರಂದು ಸಮಾರೋಪ ಸಮಾರಂಭದಲ್ಲಿ ಕೃಷ್ಣ ಜನ್ಮಾಷ್ಟಮಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net