

ಉಡುಪಿ: ಶಿವರಾತ್ರಿ ಪ್ರಯುಕ್ತ ಬುಧವಾರ ಜಿಲ್ಲೆಯ ವಿವಿಧ ಶಿವಾಲಯಗಳಿಗೆ ನೂರಾರು ಮಂದಿ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು. ದೇವಾಲಯಗಳಲ್ಲಿ ವಿಶೇಷ ಪೂಜೆ, ಆರಾಧನೆ, ಅಹೋರಾತ್ರಿ ಭಜನೆ ನಡೆಯಿತು.
ಇತಿಹಾಸ ಪ್ರಸಿದ್ಧ ಅನಂತೇಶ್ವರ-ಚಂದ್ರೇಶ್ವರ ದೇವಸ್ಥಾನಕ್ಕೆ ಸಾವಿರಾರು ಮಂದಿ ಭಕ್ತರು ಆಗಮಿಸಿದ್ದರು. ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ವಿವಿಧ ಧಾರ್ಮಿಕ ಹಾಗೂ ಸಾಂಸತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಬನ್ನಂಜೆ ಮಹಾಲಿಂಗೇಶ್ವರ, ಕೊಡವೂರು ಶಂಕರನಾರಾಯಣ, ಉದ್ಯಾವರ ಶಂಭುಶೈಲೇಶ್ವರ, ಮಲ್ಪೆ ಸರ್ವೇಶ್ವರ, ಚಕ್ರತಿರ್ಥ ಉಮಾಮಹೇಶ್ವರ, ಪರ್ಕಳ ಮಹಾಲಿಂಗೇಶ್ವರ, ಹೇರೂರು ಮಹಾಲಿಂಗೇಶ್ವರ, ಪೆರಂಪಳ್ಳಿ ಮಹಾಲಿಂಗೇಶ್ವರ, ಶಿವಪಾಡಿ ಉಮಾಮಹೇಶ್ವರ, ಕಲ್ಯಾಣಪುರ ಮಹಾಲಿಂಗೇಶ್ವರ, ಪಡುಬಿದ್ರೆ ಮಹಾಲಿಂಗೇಶ್ವರ, ಬ್ರಹ್ಮಾವರ ಮಹಾಲಿಂಗೇಶ್ವರ, ಕಟಪಾಡಿ ವಿಶ್ವನಾಥ ಕ್ಷೇತ್ರಗಳಲ್ಲಿ ಶಿವನಿಗೆ ಅಭಿಷೇಕ, ಬಿಲ್ವಾರ್ಚನೆ, ರುದ್ರಾಭಿಷೇಕ ನೆರವೇರಿಸಲಾಯಿತು.
ಬಸ್ರೂರು ಮಹತೋಭಾರ ಮಹಾಲಿಂಗೇಶ್ವರ, ಕಿರಿ ಮಂಜೇಶ್ವರ ಅಗಸ್ತ್ಯೇಶ್ವರ, ಹೇರಂಜಾಲು ಗುಡೇ ಮಹಾಲಿಂಗೇಶ್ವರ, ಬೈಂದೂರು ಸೇನೇಶ್ವರ, ಕುಂದಾಪುರ ಮೈಲಾರೇಶ್ವರ, ಹಿಲ್ಕೋಡು ಮಹಾಲಿಂಗೇಶ್ವರ, ಹೆಬ್ರಿ ಅರ್ಧ ನಾರೀಶ್ವರ, ನಂದಳಿಕೆ ಮಹಾಲಿಂಗೇಶ್ವರ, ನಿಟ್ಟೆ ಬ್ರಹ್ಮಲಿಂಗೇಶ್ವರ, ಮಿಯ್ಯಾರು ಮಹಾಲಿಂಗೇಶ್ವರ, ಎಲ್ಲೂರು ವಿಶ್ವೇಶ್ವರ, ಉಚ್ಚಿಲ ಮಹಾಲಿಂಗೇಶ್ವರ, ದೇಲಟ್ಟು ಮಹಾಲಿಂಗೇಶ್ವರ, ಮರವಂತೆ ಗಂಗಾಧರೇಶ್ವರ, ಮುರೂರು ಮಹಾಲಿಂಗೇಶ್ವರ, ಕಾಳಾವರ ಮಹಾಲಿಂಗೇಶ್ವರ, ಕೋಟೇಶ್ವರ ಕೋಟಿಲಿಂಗೇಶ್ವರ, ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ, ಕುಂದೇಶ್ವರ, ಗುಜ್ಜಾಡಿ ಗುಹೇಶ್ವರ, ಉಳ್ತೂರು ಮಹಾಲಿಂಗೇಶ್ವರ, ತೆಕ್ಕಟ್ಟೆ ಮಹಾಲಿಂಗೇಶ್ವರ, ಹಟ್ಟಿಯಂಗಡಿ ಲೋಕನಾಥೇಶ್ವರ, ಕುಂಭಾಸಿ ಶ್ರೀಹರಿಹರ ೇತ್ರದಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆಗಳು ನಡೆದವು.