ಯುಗಾದಿ ಹಬ್ಬಕ್ಕೆ 'ಸಾಯಿರಾಧಾ ಟಿವಿಎಸ್​' ಕೊಡುಗೆ...

SAI RADHA Lead
Published on

ಗ್ರಾಹಕರೊಂದಿಗೆ ಸಂಭ್ರಮಿಸಲು ಸಂಸ್ಥೆ ಸಜ್ಜು

ಐದು ಶೋರೂಂಗಳಲ್ಲಿ ಬೃಹತ್​ ದಾಸ್ತಾನು

ವಿಜಯವಾಣಿ ಸುದ್ದಿಜಾಲ ಉಡುಪಿ

ಟಿವಿಎಸ್​ ಮೋಟಾರ್​ ಕಂಪನಿಯ ಅಧಿಕೃತ ಮುಖ್ಯ ಮಾರಾಟ ಸಂಸ್ಥೆಯಾಗಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾದ್ಯಂತ ಸಾಯಿರಾಧಾ ಟಿವಿಎಸ್​ ಮನೆಮಾತಾಗಿದೆ. ಬೈಕ್​ ಪ್ರಿಯರಿಗೆ ಈ ಬಾರಿಯ ಯುಗಾದಿ ಸಂಭ್ರಮವನ್ನು ಇಮ್ಮಡಿಗೊಳಿಸಲು ಸಾಯಿರಾಧಾ ಶೋ ರೂಂ ಸಜ್ಜಾಗಿದ್ದು, ರಿಯಾಯಿತಿ ಹಾಗೂ ಕೊಡುಗೆಗಳ ಮಾರಾಟ ಹಮ್ಮಿಕೊಂಡಿದೆ.

SAI RADHA 2
ಯುಗಾದಿ ಹಬ್ಬವನ್ನು ನೂತನ ಟಿವಿಎಸ್​ ದ್ವಿಚಕ್ರ ವಾಹನಗಳೊಂದಿಗೆ ಸಂಭ್ರಮಿಸಲು ಸಂಸ್ಥೆಯ ಎಲ್ಲ ಐದು ಶೋರೂಂಗಳು ಬೃಹತ್​ ದಾಸ್ತಾನಿನೊಂದಿಗೆ ಸಜ್ಜುಗೊಂಡಿವೆ.

ವಿವಿಧ ಮೊಡೆಲ್​ ಸ್ಕೂಟರ್​

ಸಣ್ಣ ಉದ್ಯಮಗಳ ನೆಚ್ಚಿನ ಎಕ್ಸ್​ಲ್​ 100 ಮೊಪೆಡ್​, ಮಹಿಳೆಯರು, ಪುರುಷರ ಮೊದಲ ಆಯ್ಕೆಯ ಝೆಸ್ಟ್​, ಜುಪಿಟರ್​ 125, ಎಂಟಾರ್ಕ್​ 125 ಮೊದಲಾದ ಸ್ಕೂಟರ್​ಗಳು, ಸ್ಪೋರ್ಟ್ಸ್​, ಸ್ಟಾರ್​ ಸಿಟಿ, ರೇಡಿಯನ್​, ರೈಡರ್​ 125, ಆರ್​ಟಿಆರ್​ 160 ಮುಂತಾದ ಮೋಟಾರ್​ ಸೈಕಲ್​ಗಳು ಗ್ರಾಹಕರ ಕೈ ಸೇರಲು ಅಣಿಯಾಗಿವೆ.

ರೇಸಿಂಗ್​ ಬೈಕ್​ಗಳು

TVS 2
ಸಾಹಸಪ್ರಿಯ ಯುವಜನತೆಯ ಕನಸಿನ ರೊನಿನ್​, ಆರ್​ಟಿಆರ್​ 310ರಂತಹ ಅಂತಾರಾಷ್ಟ್ರೀಯ ಖ್ಯಾತಿಯ ರೇಸಿಂಗ್​ ಬೈಕ್​ಗಳು ಲಭ್ಯವಿದೆ. ಇಂಧನ ಕ್ಷಮತೆಯ, ಪರಿಸರಸ್ನೇಹಿ ಇಲೆಕ್ಟ್ರಿಕ್​ ವಾಹನ, ಐಕ್ಯೂಬ್​ ಸಹಿತ ಎಲ್ಲ ಶ್ರೇಣಿ, ಮಾದರಿಯ ದ್ವಿಚಕ್ರ ವಾಹನಗಳ ಬೃಹತ್​ ಸಂಗ್ರಹವಿದೆ ಎಂದು ಸಂಸ್ಥೆಯ ಮಾಲೀಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗರಿಷ್ಠ ಡಿಸ್ಕೌಂಟ್​, ವಿಶೇಷ ಬೋನಸ್​

Bike
ಯುಗಾದಿ ನಿಮಿತ್ತ ವಿನಿಮಯ ಬೋನಸ್​, ಉಚಿತ ಹೆಲ್ಮೆಟ್​, ವೆಹಿಕಲ್​ ಕವರ್​, ಪೆಟ್ರೋಲ್​, ಸರಳ-ಶೀಘ್ರ ಸಾಲ ಸೌಲಭ್ಯ ಮತ್ತು ಆಯ್ದ ಮಾಡೆಲ್​ಗಳ ಮೇಲೆ ಗರಿಷ್ಠ 5 ಸಾವಿರ ರೂ.ವರೆಗೆ ರಿಯಾಯಿತಿ ಸಿಗಲಿದೆ. ಜತೆಗೆ ಇನ್ನಿತರ ಕೊಡುಗೆಗಳೂ ಮಾರ್ಚ್​ ತಿಂಗಳ ಅಂತ್ಯದವರೆಗೆ ಲಭ್ಯವಿರಲಿದೆ.

ಗ್ರಾಹಕರಿಗೆ ತೃಪ್ತಿಕರ ಸೇವೆ

ಸಾಯಿರಾಧಾ ಟಿವಿಎಸ್​ ಉಡುಪಿಯಲ್ಲಿ ಮತ್ತು ಮಂಗಳೂರಿನ ಮಲ್ಲಿಕಟ್ಟೆಯಲ್ಲಿ ಅತ್ಯಾಧುನಿಕ ಸೌಲಭ್ಯ ಒಳಗೊಂಡ ಸುಸಜ್ಜಿತ ಶೋರೂಂ ಹೊಂದಿದೆ. ಉಡುಪಿ ಜಿಲ್ಲೆಯ ಕುಂದಾಪುರ, ಬ್ರಹ್ಮಾವರ ಹಾಗೂ ಮಂಗಳೂರಿನ ಬಿಜೈ ಮತ್ತು ಪುತ್ತೂರಿನಲ್ಲಿ ಸ್ವಂತ ಶಾಖೆಗಳೊಂದಿಗೆ ಹಲವಾರು ವರ್ಷದಿಂದ ಗ್ರಾಹಕರಿಗೆ ತೃಪ್ತಿಕರ ಸೇವೆ ನೀಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net