ಕಾಂಗ್ರೆಸ್ ಜಿಲ್ಲಾ ಕಚೇರಿಗೆ ಬಿಜೆಪಿ ಯುವ ಮೋರ್ಚ ಮುತ್ತಿಗೆ ಯತ್ನ

20220817_120002
Published on

ಉಡುಪಿ : ಸಾರ್ವರ್ಕರ್ ಪ್ಲೆಕ್ಸ್ ವಿವಾದ ದಿನ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಿದ್ದು, ಬುಧವಾರ ಬಿಜೆಪಿ ಯುವಮೋರ್ಚಾ ವತಿಯಿಂದ ಬ್ರಹ್ಮಗಿರಿ ಸರ್ಕಲ್ನಲ್ಲಿ ಅಳವಡಿಸಿರುವ ಸಾರ್ವರ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಕಾರ್ಯಕ್ರಮ ನಡೆಯಿತು.

ಅನಂತರ ಫ್ಲೆಕ್ಸ್ ತೆರವು ಗೊಳಿಸಲು ಕಾಂಗ್ರೆಸ್ ಪೌರಾಯುಕ್ತರಿಗೆ ಮನವಿ  ನೀಡಿರುವುದನ್ನು ಖಂಡಿಸಿ, ಯುವ ಮೋರ್ಚಾ ಕಾರ್ಯಕರ್ತರು ಕಾಂಗ್ರೆಸ್ ಜಿಲ್ಲಾ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಕಾರ್ಯಕರ್ತರನ್ನು ತಡೆದ ಪೊಲೀಸರು ವಾಪಸು ಕಳುಹಿಸಿದ್ದು, ನಾಯರ್ ಕೆರೆ ರಸ್ತೆಯಲ್ಲೇ  ಧರಣಿ ನಡೆಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಯುವ ಮೋರ್ಚಾ ಜಿಲ್ಲಾಧ್ಯಕ್ಷ ವಿಖ್ಯಾತ ಶೆಟ್ಟಿ, ಪ್ಲೆಕ್ಸ್ ತೆರವುಗೊಳಿಸಲು ಆಗ್ರಹಿಸುತ್ತಿರುವವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು. ಪಿಎಸ್ಐ ಮತ್ತು ಅದರ ಸಂಬಂಧಿಕ ಸಂಘಟನೆ ಕಾಂಗ್ರೆಸ್ ಸಾವರ್ಕರ್ ಅವರನ್ನು ವಿರೋಧಿಸುತ್ತಿದ್ದು, ಯುವ ಮೋರ್ಚಾ ವತಿಯಿಂದ ಪ್ರತಿ ಗ್ರಾಮಗಳಲ್ಲಿ ವೀರ ಸಾವರ್ಕರ್ ಫೋಟೋ ಅಳವಡಿಸಲಾಗುವುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net