ಪದ್ಮಶಾಲಿ ನೇಕಾರ ಪ್ರತಿಷ್ಠಾನದ ನಿಯೋಗದಿಂದ ನಿರ್ಮಲಾ ಸೀತಾರಾಮನ್ ಭೇಟಿ

IMG-20230715-WA0068
Published on

ಉಡುಪಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇವರನ್ನು ಪದ್ಮಶಾಲಿ ನೇಕಾರ ಪ್ರತಿಷ್ಠಾನ ಮತ್ತು ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ವತಿಯಿಂದ ಸದಸ್ಯರು ಭೇಟಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವೆ, ಉಡುಪಿಯ ಕೈಮಗ್ಗದ ಸೀರೆಗಳು ಮತ್ತು ಬಟ್ಟೆಗಳು ಅತ್ಯುತ್ತಮ ಗುಣಮಟ್ಟವನ್ನು ಹೊಂದಿವೆ. ಪ್ರಸ್ತುತ ಕಾಲಘಟ್ಟಕ್ಕೆ ಅನುಗುಣವಾಗಿ ಆಧುನಿಕತೆಯನ್ನು ಅಳವಡಿಸಿಕೊಂಡು, ವಿನ್ಯಾಸಗಳನ್ನು ಬದಲಿಸಿ, ಹೊಸತನದ ಬಟ್ಟೆಗಳನ್ನು ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ಪೂರೈಸಲು ಸಲಹೆಯನ್ನು ನೀಡಿದರು.

ಉಡುಪಿಯಲ್ಲಿ ಕೈಮಗ್ಗದ ನೇಯ್ಗೆ ಉದ್ಯಮ ನಡೆದು ಬಂದ ಹಾದಿ, ಪ್ರಸ್ತುತ ಸ್ಥಿತಿಗತಿ, ಪುನಶ್ಚೇತನಕ್ಕಾಗಿ ಹಮ್ಮಿಕೊಂಡಿರುವ ಕಾರ್ಯ ಯೋಜನೆಗಳ ಬಗ್ಗೆ ಸವಿವರವಾಗಿ ಮನವರಿಕೆ ಮಾಡಿ, ವಿಸ್ತೃತ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕ ಯಶ್ ಪಾಲ್ ಸುವರ್ಣ, ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್, ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಪ್ರಸನ್ನ ಎಚ್, ಪದ್ಮಶಾಲಿ ನೇಕಾರ ಪ್ರತಿಷ್ಠಾನದ ಅಧ್ಯಕ್ಷ ರತ್ನಾಕರ ಇಂದ್ರಾಳಿ, ನಗರಸಭಾ ಸದಸ್ಯ ಮಂಜುನಾಥ ಮಣಿಪಾಲ್, ಕೇಂದ್ರ ಸರಕಾರದ ಮಾಜಿ ಆರ್ಥಿಕ ಸಲಹೆಗಾರ ಡಾ.ಜಗದೀಶ್ ಶೆಟ್ಟಿಗಾರ್, ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ವ್ಯವಸ್ಥಾಪಕ ನಿರ್ದೇಶಕ ದಿನೇಶ್ ಕುಮಾರ್, ಪ್ರಮುಖರಾದ ಭಗವಾನ್ ದಾಸ್ ಶೆಟ್ಟಿಗಾರ್, ವಿಶ್ವನಾಥ್ ಶೆಟ್ಟಿಗಾರ್, ಕೇಶವ ಶೆಟ್ಟಿಗಾರ್, ದೇವರಾಯ ಶೆಟ್ಟಿಗಾರ್, ಅಶೋಕ್ ಶೆಟ್ಟಿಗಾರ್ ಅಲೆವೂರು, ಲಕ್ಷ್ಮಿ ಕಿನ್ನಿಮುಲ್ಕಿ, ರವಿಕಲಾ ಮತ್ತು ಸುಧಾಕರ ಶೆಟ್ಟಿಗಾರ್ ಮಂಗಳೂರು, ಹರೀಶ್ ಶೆಟ್ಟಿಗಾರ್ ಮುಲ್ಕಿ, ಚೇತನ್ ಕಿನ್ನಿಗೋಳಿ ಇವರು ಉಪಸ್ಥಿತರಿದ್ದರು.

ಕೈಮಗ್ಗದ ಉಡುಪಿ ಶಾಲು ಹೊದಿಸಿ, ಗೀತಾ ಕೇಶವ ಶೆಟ್ಟಿಗಾರ್ ಮತ್ತು ಜಗನ್ನಾಥ ಶೆಟ್ಟಿಗಾರ್ ಇವರು ನೇಯ್ದ ಸೀರೆಗಳನ್ನು ನೀಡಿ ವಿತ್ತ ಸಚಿವರನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net