ಜಾನಪದಕ್ಕೆ ಬೇಕಿದೆ ಭದ್ರ ನೆಲೆ: ಡಾ. ಕೆ.ಚಿನ್ನಪ್ಪ ಗೌಡ

UDP-24-4A-Rangabhoomi
Published on

ಉಡುಪಿ: ಐದಾರು ದಶಕದ ಹಿಂದೆ ಜಾನಪದಕ್ಕೆ ಸಾಂಸ್ಥಿಕ ನೆಲೆಯಿತ್ತು. ಜಾನಪದ ಸಾಹಿತ್ಯ ಪಾಠವಾಗಿ ನೋಡುವ ಕ್ರಮವೂ ಇತ್ತು. ನಂತರದ ದಿನಮಾನಗಳಲ್ಲಿ ಜನಮಾನಸದಿಂದ ದೂರ ಸರಿಯುತ್ತಲಿದ್ದು, ಜಾನಪದದ ಅಧ್ಯಯನಕ್ಕೆ ಕಾಯಕಲ್ಪ ಆಗಬೇಕಿದೆ. ಅದಕ್ಕೆ ಭದ್ರವಾದ ನೆಲೆ ಬೇಕಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಕೆ.ಚಿನ್ನಪ್ಪ ಗೌಡ ಹೇಳಿದರು.

ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ರಂಗಭೂಮಿ ಉಡುಪಿ ನೇತೃತ್ವದಲ್ಲಿತಲ್ಲೂರ್ಸ್​ ಫ್ಯಾಮಿಲಿ ಟ್ರಸ್ಟ್​ ಉಡುಪಿ ಹಾಗೂ ಕರ್ನಾಟಕ ಜಾನಪದ ಪರಿಷತ್​ ಬೆಂಗಳೂರು, ಉಡುಪಿ ಜಿಲ್ಲಾ ಪರಿಷತ್​ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ರಂಗಭೂಮಿ ರಂಗೋತ್ಸವ ಕಾರ್ಯಕ್ರಮದಲ್ಲಿ "ಜಾನಪದ ಪ್ರತಿಭಾ ಪ್ರಶಸ್ತಿ' ಸ್ವೀಕರಿಸಿ ಮಾತನಾಡಿದರು.

ಜಾನಪದಕ್ಕೆ ಸಂಬಂಧಿಸಿ ಸಮ್ಮೇಳನ, ಕಾರ್ಯಕ್ರಮಗಳು ನಡೆಯುತ್ತಲೇ ಇದೆ. ಜನಪದ ನಶಿಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸುವವರೂ ಇದ್ದಾರೆ. ಆದರೆ, ಜನಪದ ಸಂಸತಿ ರಸುವ ಉದ್ದೇಶದಿಂದ ಒಂದು ಸಂಸ್ಥೆಯನ್ನು ಕಟ್ಟಿ, ಈಗಿರುವ ಜನಸಂಸತಿಯನ್ನು ಸಂಗ್ರಹಿಸುವ ಕೆಲಸ ಆಗಬೇಕಿದೆ. ನಮ್ಮ ಜಾನಪದ ಜೀವಂತಿಕೆ ಇರುವ ಕಲೆಯಾಗಿರುವುದರಿಂದಲೇ ವಿದೇಶಿಗರೂ ನೆಚ್ಚಿಕೊಳ್ಳುತ್ತಾರೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ನಾನು ಮಂಗಳೂರಿನಲ್ಲಿ ಕನ್ನಡ ಎಂಎ ಕಲಿಯುತ್ತಿದ್ದಾಗ ಚಿನ್ನಪ್ಪ ಗೌಡ ಅವರು ನನ್ನ ಗುರುವಾಗಿದ್ದರು. ಅವರನ್ನು ಈಗ ಸನ್ಮಾನಿಸುವ ಅವಕಾಶ ಲಭಿಸಿರುವುದು ನನ್ನ ಭಾಗ್ಯ ಎಂದರು.

ರಂಗಭೂಮಿ ಉಡುಪಿಯ ಜಿಲ್ಲಾಧ್ಯಕ್ಷ ಡಾ. ತಲ್ಲೂರು ಶಿವರಾಂ ಶೆಟ್ಟಿ ಸಭಾಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷಿ$್ಮನಾರಾಯಣ ಕಾರಂತ, ರಂಗಭೂಮಿ ಉಡುಪಿಯ ಉಪಾಧ್ಯಕ್ಷ ರಾಜಗೋಪಾಲ್​ ಬಲ್ಲಾಳ್​, ಗಿರಿಜಾ ತಲ್ಲೂರು ಶಿವರಾಂ ಶೆಟ್ಟಿ, ಶಾಂತಿ ಸಿ. ಗೌಡ ಉಪಸ್ಥಿತರಿದ್ದರು.
ಸುಧೀರ್​ ಭಟ್​ ಪೆರ್ಡೂರು ಯಕ್ಷಗಾನ ಶೈಲಿಯಲ್ಲಿ ಗಣಪತಿ ಪ್ರಾರ್ಥನೆ ಮಾಡಿದರು. ಕಜಾಪ ಉಡುಪಿ ಅಧ್ಯಕ್ಷ ಸುನೀಲಕುಮಾರ್​ ಶೆಟ್ಟಿ ಸ್ವಾಗತಿಸಿದರು. ರಂಗಭೂಮಿ ಉಡುಪಿಯ ಪ್ರಧಾನ ಕಾರ್ಯದರ್ಶಿ ಪ್ರದಿಪಚಂದ್ರ ಕುತ್ಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನುಷಾ ಆಚಾರ್ಯ ಸನ್ಮಾನ ಪತ್ರ ವಾಚಿಸಿದರು. ರಂಗಭೂಮಿ ಉಡುಪಿಯ ಉಪಾಧ್ಯಕ್ಷ ಭಾಸ್ಕರ ರಾವ್​ ಕಿದಿಯೂರು ವಂದಿಸಿದರು. ಕಜಾಪ ಮಾಜಿ ಕಾರ್ಯದರ್ಶಿ ರವಿರಾಜ ನಾಯಕ ಕಾರ್ತಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net