ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಶತಾಯುಷಿ ಗುರುವ ಕೊರಗ ನಿಧನ

IMG-20210822-WA0024
Published on

ಉಡುಪಿ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಶತಾಯುಷಿ ಡೋಲು (ಕಡ್ಡಾಯಿ) ಕಲಾವಿದ ಗುರುವ ಕೊರಗ(105) ಅವರು ವಯೋಸಹಜ ಭಾನುವಾರ ನಿಧನರಾದರು. ಹಿರಿಯಡ್ಕ, ಗುಡ್ಡೆಅಂಗಡಿ ಬಲ್ಕೋಡಿ ನಿವಾಸಿಯಾಗಿದ್ದ ಅವರು ಡೋಲು ಕಲಾವಿದ ತೋಮ ಮತ್ತು ತುಂಬೆ ದಂಪತಿಯ ಪುತ್ರ‌. ತನ್ನ 12ನೇ ವಯಸ್ಸಿನಿಂದ ಬುಟ್ಟಿ ಹೆಣೆಯುವ ಕಾಯಕೊಂದಿಗೆ ಡೋಲು ಬಾರಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು‌.

ಡೋಲು ನುಡಿಸುವುದರ ಮೂಲಕ ಜನಪದ ಸಂಸ್ಕೃತಿಯ ಅನನ್ಯತೆಯನ್ನು ಪರಿಚಯಿಸಿದ್ದರು.
ಕೊರಗ ಬುಡಕಟ್ಟು ಸಮುದಾಯದ ಗುರುವ ಕೊರಗ ಡೋಲು ಕಲೆಯಲ್ಲಿ ಪ್ರಖ್ಯಾತಿಗಳಿಸಿ ಈ ಮೂಲಕ ಸಮುದಾಯಕ್ಕೆ ಪ್ರಪ್ರಥಮ ರಾಜ್ಯೋತ್ಸವ ಪ್ರಶಸ್ತಿಯ ಗರಿ ಮುಡಿಗೇರಲು ಕಾರಣೀಭೂತರಾಗಿದ್ದರು‌‌.

ತುಳುನಾಡಿನ ಜಾನಪದಿಯ ಸಂಸ್ಕೃತಿಯನ್ನು ರಾಜ್ಯ ಮಟ್ಟದಲ್ಲಿ ಗುರುತಿಸುವಂತೆ ಮಾಡುವ ಮೂಲಕ ಇವರು ತುಳುನಾಡು ಹಾಗೂ ಕೊರಗ ಸಮುದಾಯಕ್ಕೆ ಕೀರ್ತಿ ತಂದಿದ್ದರು.

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net