

ಉಡುಪಿ: ಪ್ರಾಕೃತಿಕ ಹಾನಿ, ರಾಜಕೀಯ ಹಾನಿಗಳಿಂದ ಜಝರ್ರಿತವಾಗಿರುವ ವಿಶ್ವಕ್ಕೆ ಶಾಂತಿ ಸಂದೇಶ ಬಹಳ ಮುಖ್ಯ. ಹೀಗಾಗಿ ಶ್ರೀಕೃಷ್ಣನ ಗೀತೆಯ ಸಂದೇಶವನ್ನು ವಿಶ್ವಕ್ಕೆ ಕೊಡುವ ಪರ್ಯಾಯ ಆಗಬೇಕು ಎಂದು ಪುತ್ತಿಗೆ ಮಠದ ಸ್ವಾಗತ ಸಮಿತಿ ಗೌರವಾಧ್ಯಕ್ಷ, ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅಶಿಸಿದರು.
ಶನಿವಾರ ಪುತ್ತಿಗೆ ಮಠದಲ್ಲಿ ಪರ್ಯಾಯ ಸ್ವಾಗತ ಸಮಿತಿ ಕಾರ್ಯಾಲಯ ಉದ್ಘಾಟಿಸಿ, ಪರ್ಯಾಯ ಲಾಂಛನವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಅನೇಕ ದೇಶಗಳಲ್ಲಿ ಭಗವದ್ಗೀತೆ ಮ್ಯಾನೇಜ್ಮೆಂಟ್ ಕೋರ್ಸ ನೀಡಲಾಗುತ್ತಿದೆ. ಗೀತೆಯಲ್ಲಿ ವೈಯಕ್ತಿಕ, ಸಾಮಾಜಿಕ, ರಾಜಕೀಯ ಸೇರಿದಂತೆ ಅನೇಕ ವಿಚಾರಗಳನ್ನು ಚರ್ಚಿಸಲಾಗಿದೆ. ಎಲ್ಲರಿಗೂ ಈ ಸಂದೇಶ ತಲುಪುವಂತಾಗಬೇಕು ಎಂದರು.
ಎಸ್ಡಿಎಂನಲ್ಲಿ 25 ಕೊಠಡಿ ಮೀಸಲು
ಅತಿಥಿ ಸತ್ಕಾರ ಬಹಳ ಮುಖ್ಯ. ಕುತ್ಪಾಡಿ ಎಸ್ ಡಿ ಎಂ ಅಯುರ್ವೆದ ಅಸ್ಪತ್ರೆ ಹಾಗೂ ಕಾಲೇಜಿನಲ್ಲಿ 25 ಕೊಠಡಿಗಳನ್ನು ಪರ್ಯಾಯಕ್ಕೆ ಆಗಮಿಸುವ ಗಣ್ಯರಿಗೆ ಮೀಸಲಿಡಲಾಗುವುದು. ಗ್ರಾಮಾಭಿವೃದ್ಧಿ ಯೋಜನೆಯ 2 ಸಾವಿರ ಕಾರ್ಯಕರ್ತರು ಪರ್ಯಾಯಕ್ಕೆ ಸಹಕರಿಸಲಿದ್ದಾರೆ ಎಂದು ತಿಳಿಸಿದರು.
ಸಮಿತಿ ಕಾರ್ಯಾಧ್ಯಕ್ಷ, ಮಾಜಿ ಶಾಸಕ ಕೆ. ರುಪತಿ ಭಟ್ ಮಾತನಾಡಿ, ಪುತ್ತಿಗೆ ಪರ್ಯಾಯಕ್ಕೆ ವಿಶ್ವಾದ್ಯಂತ ಭಕ್ತರು ಆಗಮಿಸುವ ನಿರೀೆ ಇದೆ. ಹೀಗಾಗಿ ವಸತಿ ಸಮಸ್ಯೆ ನಿವಾರಣೆಗೆ ಅಸುಪಾಸಿನ ನಾಗರಿಕರು ತಮ್ಮ ಮನೆಯಲ್ಲೇ ಅತಿಥಿಗಳನ್ನು ಉಳಿಸಿಕೊಂಡು ಸಹಕರಿಸಬೇಕು. ಅಸಕ್ತರು ಕಾರ್ಯಾಲಯದಲ್ಲಿ ನೋಂದಣಿ ಮಾಡಿಕೊಳ್ಳಬಹುದು ಎಂದರು.
ಸ್ವಾಗತ ಸಮಿತಿ ಅಧ್ಯಕ್ಷ ಡಾ. ಎಚ್.ಎಸ್. ಬಲ್ಲಾಳ್, ಪ್ರಧಾನ ಕಾರ್ಯದರ್ಶಿ ಬೆಳಪು ದೇವಿಪ್ರಸಾದ್ ಶೆಟ್ಟಿ, ಕೋಶಾಧಿಕಾರಿ ನಾಗೇಶ್ ಹೆಗ್ಡೆ, ರಂಜನ್ ಕಲ್ಕೂರ, ಕಟೀಲು ಅಸ್ರಣ್ಣ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ್ ಗಂಟಿಹೊಳೆ, ಕಿರಣ್ ಕುಮಾರ್ ಕೊಡ್ಗಿ, ಯಶ್ಪಾಲ್ ಸುವರ್ಣ, ಹೇರಿಂಜೆ ಕೃಷ್ಣ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕುಂಭಾಶಿ ಸೂರ್ಯನಾರಾಯಣ ಉಪಾಧ್ಯಾಯ ಮೊದಲಾದವರು ಉಪಸ್ಥಿತರಿದ್ದರು.
ದಿವಾನ ನಾಗರಾಜ ಅಚಾರ್ಯ ಸ್ವಾಗತಿಸಿ, ಶ್ರೀಗಳ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ವಂದಿಸಿದರು. ರಮೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.