ಜ್ವರ ಬಂತೆಂದು ಆಸ್ಪತ್ರೆಗೆ ದಾಖಲಾದ ರೋಗಿಗಳಿಬ್ಬರ ಬಿಲ್​ ಮೊತ್ತ ಕೇಳಿದ್ರೆ ಶಾಕ್​ ಆಗೋದು ಖಂಡಿತ!

Hospital Bill New
Published on

ಉಡುಪಿ: ಜ್ವರ ಇದೆ ಎಂದು ಆಸ್ಪತ್ರೆಗೆ ದಾಖಲಾದ ರೋಗಿಗಳಿಬ್ಬರು ಬಿಲ್​ ನೋಡಿ ಕುಟುಂಬದವರು ಗಾಬರಿಗೆ ಒಳಗಾದ ಘಟನೆ ಉಡುಪಿಯಲ್ಲಿ ನಡೆದಿದೆ.

ಸೈಬರ್ ಕಟ್ಟೆ ಸಮೀಪದ ಕಲ್ಗದ್ದೆ ನಿವಾಸಿಗಳಾದ ಒಂದೇ ಕುಟುಂಬದ ರಾಜೇಶ್ ಮತ್ತು ರಾಜೀವಿ ಇಬ್ಬರಲ್ಲೂ ಜ್ವರ ಕಾಣಿಸಿಕೊಂಡಿತ್ತು. ಕರೊನಾ ಭಯ ಹಿನ್ನೆಲೆಯಲ್ಲಿ ಇಬ್ಬರು ತಕ್ಷಣ ಬ್ರಹ್ಮಾವರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಸದ್ಯ ಕರೊನಾ ಪಾಸಿಟಿವ್ ಹಿನ್ನಲೆಯಲ್ಲಿ ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಲು ಖಾಸಗಿ ಆಸ್ಪತ್ರೆಯಿಂದ ಸೂಚನೆ ರವಾನೆಯಾಗಿದೆ. ಆಂಬ್ಯುಲೆನ್ಸ್ ತಂದು ಬಿಲ್ ಕಟ್ಟಿ ಕೋವಿಡ್ ಆಸ್ಪತ್ರೆಗೆ ಕರೆದೊಯ್ಯುವಂತೆ ಆಸ್ಪತ್ರೆ ತಿಳಿಸಿದೆ.

ಆದರೆ, ಬಿಲ್ ನೋಡಿ ರೋಗಿಗಳ ಕುಟುಂಬಕ್ಕೆ ದಿಕ್ಕೆಟ್ಟಂತಾಗಿದೆ. ಬರೋಬ್ಬರಿ 57600 ರೂ. ಪಿಪಿಇ ಕಿಟ್ ಚಾರ್ಜ್ ಮಾಡಿದ್ದಾರೆ. ಒಟ್ಟು ಒಂದು ಮನೆಯ ಇಬ್ಬರು ರೋಗಿಗಳಿಗೆ 2,31,830/- ರೂಪಾಯಿ ಬಿಲ್ ಬಂದಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯೇ ಸರಿ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net