

ಉಡುಪಿ: ಪ್ರಯಾಗರಾಜ್ ಕುಂಭಮೇಳಕ್ಕೆ ತೆರಳುವ ವಿಶೇಷ ರೈಲಿಗೆ ಸೋಮವಾರ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನತಿರ್ಥ ಶ್ರೀಪಾದರು ಹಸಿರು ನಿಶಾನೆ ತೋರಿದರು.
ರೈಲು ಬೋಗಿಗೆ ಗಂಧ, ಕುಂಕುಮ ಹಚ್ಚಿ ಮಲ್ಲಿಗೆ ಹೂವಿಟ್ಟು, ಪ್ಲಾ$್ಯಟ್ಫಾರಂನಲ್ಲಿ ತೆಂಗಿನಕಾಯಿ ಒಡೆದು ಪೇಜಾವರ ಶ್ರೀ ಓಂ ಪತಾಕೆ ಹಾಗೂ ಹಸಿರು ಪತಾಕೆ ನಿಶಾನೆ ತೋರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕುಂಭಮೇಳಕ್ಕೆ ಉಡುಪಿಯಿಂದ ತೆರಳುವ ಭಕ್ತರಿಗಾಗಿ ಕೇಂದ್ರ ಸರ್ಕಾರ ವಿಶೇಷ ರೈಲು ವ್ಯವಸ್ಥೆ ಮಾಡಿದ್ದು, 21 ಬೋಗಿಗಳಲ್ಲಿ 1,410 ಭಕ್ತರು ತೆರಳಿದ್ದಾರೆ. ವೆಯ್ಟಿಂಗ್ ಲಿಸ್ಟ್ನಲ್ಲಿದ್ದವರಿಗೂ ತೆರಳಲು ಅವಕಾಶ ನೀಡಲಾಗಿದೆ. ಕುಂಭಮೇಳ ಫೆ. 25ರ ನಂತರವೂ ವಿಸ್ತರಣೆಯಾದರೆ ಉಡುಪಿಯಿಂದ ಇನ್ನೊಂದು ರೈಲು ಆರಂಭಕ್ಕೆ ಯತ್ನಿಸಲಾಗುವುದು ಎಂದರು.
ಶಾಸಕರಾದ ಯಶಪಾಲ್ ಎ. ಸುವರ್ಣ ಉಡುಪಿ, ಕಿರಣ್ ಕೊಡ್ಗಿ ಕುಂದಾಪುರ, ಸುರೇಶ್ ಶೆಟ್ಟಿ ಗುರ್ಮೆ ಕಾಪು ಮತ್ತು ಗುರುರಾಜ್ ಶೆಟ್ಟಿ ಗಂಟಿಹೊಳೆ ಬೈಂದೂರು, ಜಿ.ಪಂ. ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ, ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ವೀಣಾ ಎಸ್. ಶೆಟ್ಟಿ, ಪೆರ್ಣಂಕಿಲ ಶ್ರೀಶ ನಾಯಕ್, ಗಣೇಶ್ ಪುತ್ರನ್, ಗೌತಮ್ ಶೆಟ್ಟಿ ಉಪಸ್ಥಿತರಿದ್ದರು.