ಉಡುಪಿ ನಗರಕ್ಕೆ ವಕ್ಕರಿಸಿದ ಓಮಿಕ್ರಾನ್

lpuftb8hcwcheb4g_1638040988
Published on

ಉಡುಪಿ: ನಗರ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಇಬ್ಬರಲ್ಲಿ ಕೋವಿಡ್ ರೂಪಾಂತರಿ ತಳಿ ಓಮಿಕ್ರಾನ್‌ ವೈರಸ್ ಪಟ್ಟೆಯಾಗಿದೆ.

ಒಮಿಕ್ರಾನ್ ಪ್ರಕರಣದ  ಕುರಿತು ಟ್ವೀಟ್‌ ಮಾಡಿರುವ ಆರೋಗ್ಯ ಸಚಿವ ಡಾ.ಸುಧಾಕರ್‌ 82 ವರ್ಷದ ಪುರುಷ ಹಾಗೂ 73 ವರ್ಷದ ಮಹಿಳೆಯಲ್ಲಿ ಪ್ರಕರಣ ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ.

ಕೋವಿಡ್ ಪ್ರಾಥಮಿಕ ಸಂಪರ್ಕ ಹೊಂದಿದ್ದ ಇಬ್ಬರನ್ನು ಪರೀಕ್ಷಿಸಿದ ವೇಳೆ ಹೊಸ ಪ್ರಬೇಧ ಪತ್ತೆಯಾಗಿದೆ. ಇಬ್ಬರು ಯಾವುದೆ ಪ್ರಯಾಣ ಹಿನ್ನಲೆ ಹೊಂದಿಲ್ಲ. ಯಾವುದೇ ರೋಗಲಕ್ಷಣವಿಲ್ಲ. ಆದರೂ ಒಮಿಕ್ರಾನ್‌ ಕಂಡು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net