ನಾಗರಪಂಚಮಿಗೆ ಭರದ ಸಿದ್ಧತೆ

udp-20-panchami 1
Published on

ಉಡುಪಿ: ಜಿಲ್ಲೆಯಾದ್ಯಂತ ನಾಗರಪಂಚಮಿ ಉತ್ಸವಕ್ಕೆ ಭರದ ಸಿದ್ಧತೆ ನಡೆಯುತ್ತಿದ್ದು, ದೇವರಿಗೆ ಹೂ, ಹಣ್ಣು ಖರೀದಿ ಭರಾಟೆ ಜೋರಾಗಿದೆ. ಸೋಮವಾರ ನಾಗಸನ್ನಿಧಿ, ಕುಟುಂಬದ ಮೂಲ ನಾಗಬನಗಳಲ್ಲಿ ನಾಗರಪಂಚಮಿ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ.

ಜಿಲ್ಲಾದ್ಯಂತ ವ್ಯಾಪಾರ ಚಟುವಟಿಕೆ ಚುರುಕುಗೊಂಡಿದ್ದು, ಹೊರ ಜಿಲ್ಲೆಗಳಿಂದ ಆಗಮಿಸಿದ ವ್ಯಾಪಾರಿಗಳು ರಥಬೀದಿ, ಸರ್ವಿಸ್​ ಬಸ್​ ನಿಲ್ದಾಣ, ಆದಿ ಉಡುಪಿ, ಕೆ.ಎಂ. ಮಾರ್ಗ, ಚಿತ್ತರಂಜನ್​ ವೃತ್ತ, ಮಣಿಪಾಲ ಮೊದಲಾದ ಕಡೆ ಟೆಂಟ್​ ಹಾಕಿ ಕೇದಗೆ, ಸಿಂಗಾರ ಹೂವು, ಸೀಯಾಳ, ಕೆಂದಾಳೆ ಮಾರಾಟದಲ್ಲಿ ತೊಡಗಿದ್ದಾರೆ. ಪ್ರಮುಖವಾಗಿ ನಾಗದೇವರಿಗೆ ಪ್ರಿಯವಾಗಿರುವ ಹಿಂಗಾರ, ಅರಿಶಿಣ ಎಲೆ, ಕೇದಗೆ ಹೂ ಬೇಡಿಕೆ ಹೆಚ್ಚಿದೆ.

ದೇವಾಲಯಗಳಲ್ಲಿ ಆಚರಣೆ
ಶ್ರೀ ಕೃಷ್ಣ ಮಠದಲ್ಲಿರುವ ಸುಬ್ರಹ್ಮಣ್ಯ ದೇವರ ಗುಡಿ, ತಾಂಗೋಡು, ಮಾಂಗೋಡು, ಮುಚ್ಲಕೋಡು, ಅರಿತೋಡು ಶ್ರೀ ನಾಗಸನ್ನಿಧಿ, ಕಡೆಕಾರ್​ ಶ್ರೀ ಲಕ್ಷಿ$್ಮನಾರಾಯಣ ಮಠ ಶ್ರೀನಾಗ ದೇವರ ಗುಡಿಯಲ್ಲಿ, ದೊಡ್ಡಣಗುಡ್ಡೆ ಸಗ್ರಿಯ ನೈಸರ್ಗಿಕ ನಾಗಬನ, ಮಣಿಪಾಲ ಮಂಚಿಕರೆಯ ನಾಗಬನ, ಕೊಡವೂರು ಶಂಕರನಾರಾಯಣ ದೇವಳದ ನಾಗಕಟ್ಟೆ, ಕಲ್ಸಂಕ ಗುಂಡಿಬೈಲು ನಾಗಬ್ರಹ್ಮ ಸ್ಥಾನ ಸೇರಿದಂತೆ ಮೊದಲಾದ ಕಡೆಗಳಲ್ಲಿ ನಾಗರಪಂಚಮಿ ವಿಶೇಷ ಪೂಜೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net