ಉಡುಪಿ ಜಿಲ್ಲೆಯ ಮತಗಟ್ಟೆಗೆ ಹೊರಟ ಅಧಿಕಾರಿಗಳು

udp-25-mustering 4b
Published on

ಉಡುಪಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲೆಯ 866 ಮತಗಟ್ಟೆಗಳಿಗೆ ಪೊಲೀಸರು,ಚುನಾವಣಾ ಸಿಬ್ಬಂದಿ, ಅಧಿಕಾರಿಗಳ ತಂಡ ಉಡುಪಿ, ಕುಂದಾಪುರ, ಕಾರ್ಕಳ, ಕಾಪು ಮಸ್ಟರಿಂಗ್​ ಸೆಂಟರ್​ಗಳಿಂದ ಮತಯಂತ್ರ ಪರಿಕರಗಳೊಂದಿಗೆ ಪ್ರಯಾಣ ಬೆಳೆಸಿದ್ದಾರೆ.

ಮಸ್ಟರಿಂಗ್​ ಸೆಂಟರ್​ನಲ್ಲಿ ಬೆಳಗ್ಗೆಯೇ ಹಾಜರಾಗಿದ್ದ ಸಿಬ್ಬಂದಿ, ಅಧಿಕಾರಿಗಳು ವಿವಿಪ್ಯಾಟ್​, ಮತಯಂತ್ರದ ಪರಿಕರಗಳ ಬಾಕ್ಸನ್ನು ಸ್ವೀಕರಿಸಿದರು. ಈ ವೇಳೆ ಹಂತಿಮ ಹಂತದ ಮತದಾನ ತರಬೆೇತಿ ನಡೆಯಿತು. ಸಿಬ್ಬಂದಿ ಮತ್ತು ಅಧಿಕಾರಿಗಳ ಆರೋಗ್ಯ ತಪಾಸಣೆ ನಡೆಸಿ, ಪ್ರಾಥಮಿಕ ಚಿಕಿತ್ಸಾ ಕಿಟ್​ ಗಳನ್ನು ವಿತರಿಸಲಾಯಿತು.

ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಶಿಕ್ಷಕರು, ಬ್ಯಾಂಕ್​ ನೌಕರರ ಸಹಿತ4120ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.ಉಡುಪಿ ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳಿಗೆಅಜ್ಜರಕಾಡು ಸೇಂಟ್​ ಸಿಸಿಲಿ ಶಾಲೆಯ ಮಸ್ಟರಿಂಗ್​ ಕೇಂದ್ರ,ಕಾಪು ವಿಧಾನ ಸಭಾ ಕ್ಷೇತ್ರವ್ಯಾಪ್ತಿಯ ಮತಗಟ್ಟೆಗಳಿಗೆ ಉಳಿಯಾರುಗೋಳಿ ದಂಡತೀರ್ಥ ಆಂಗ್ಲ ಮಾಧ್ಯಮ ಶಾಲೆಯ ಮಸ್ಟರಿಂಗ್​ ಕೇಂದ್ರ,ಕುಂದಾಪುರ ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳಿಗೆಭಂರ್ಡಾಕರ್ಸ್​ ಕಾಲೇಜಿನ ಮಸ್ಟರಿಂಗ್​ ಕೇಂದ್ರ,ಕಾರ್ಕಳ ವಿಧಾನಸಭಾ ಕ್ಷೇತ್ರಮತಗಟ್ಟೆಗಳಿಗೆಕಾಬೆಟ್ಟು ಎಂಪಿಎಂ ಪ್ರಥಮ ದರ್ಜೆಕಾಲೇಜಿನ ಮಸ್ಟರಿಂಗ್​ ಕೇಂದ್ರವಾಗಿತ್ತು. ಪ್ರತಿ ಮಸ್ಟರಿಂಗ್​ ಸೆಂಟರ್​ನಲ್ಲಿಶೇ.5ರಷ್ಟುಹೆಚ್ಚುವರಿಸಿಬ್ಬಂದಿಉಳಿದುಕೊಳ್ಳಲಿದ್ದು,ಅಗತ್ಯ ಇರುವಲ್ಲಿಗೆ ಅವರನ್ನು ತಾತ್ಕಾಲಿಕ ನೆಲೆಯಲ್ಲಿ ನಿಯೋಜಿಸಲಾಗುತ್ತದೆ.ಉಡುಪಿ ಸೈಂಟ್​ ಸಿಸಿಲಿ ಶಿಕ್ಷಣ ಸಂಸ್ಥೆಯ ಮಸ್ಟರಿಂಗ್​ ಕೇಂದ್ರದಲ್ಲಿ 2000ಮಂದಿಗೆ ಬೆಳಗ್ಗೆ ಉಪಹಾರ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಮತಕಟ್ಟೆಯಲ್ಲಿ ಕಾರ್ಯನಿರತ ಸಿಬ್ಬಂದಿಗೆ ಊಟ, ತಿಂಡಿ ಪೂರೈಸಲು ಆಯಾ ಶಾಲೆಯ ಮುಖ್ಯೋಪಾಧ್ಯಾಯರ ಅಕ್ಷರದಾಸೋಹ ಖಾತೆಗೆಒಟ್ಟು 2000 ರೂ. ಹಣಜಮೆ ಮಾಡಲಾಗಿದೆ.

100ಕ್ಕೂ ಹೆಚ್ಚುಸಿಸಿಟಿವಿ
ಅಜ್ಜರಕಾಡು ಸೈಂಟ್​ ಸಿಸಿಲಿ ಶಿಕ್ಷಣ ಸಂಸ್ಥೆ ಉಡುಪಿ&ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕೇಂದ್ರವಾಗಿದ್ದು, ಏ.26ರಂದು ಚುನಾವಣೆ ಮುಗಿದ ಬಳಿಕ 8 ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ಇಲ್ಲಿನ ಭದ್ರತಾ ಕೊಠಡಿಯಲ್ಲಿ ಸಂಗ್ರಹಿಸಲಾಗುತ್ತದೆ. ಭದ್ರತೆಗಾಗಿ 16 ಸ್ಟ್ರಾಂಗ್​ರೂಂಗಳನ್ನು ಮಾಡಲಾಗಿದ್ದು, ತಲಾ 2 ಕೊಠಡಿಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದ ಮತಪೆಟ್ಟಿಗೆಗಳನ್ನು ತೆಗೆದಿರಿಸಲಾಗುತ್ತದೆ. ಭದ್ರತೆ ದೃಷ್ಟಿಯಿಂದ 100ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಅಳವಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net