ಕೈ ತೋಟ ನಿರ್ಮಿಸಿ ತ್ಯಾಜ್ಯ ಹಾಕುವವರಿಗೆ ಟಾಂಗ್ ಕೊಟ್ಟ ಉಡುಪಿ ನಗರಸಭೆ

udupi new
Published on

ಉಡುಪಿ: ರಸ್ತೆ ಬದಿ ತ್ಯಾಜ್ಯ ಎಸೆಯದಂತೆ ನಗರಸಭೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜವಾಗುತ್ತಿಲ್ಲ. ದಂಡ ವಿಧಿಸಿದರೂ ಜನರು ಕ್ಯಾರೇ ಎನ್ನುತ್ತಿಲ್ಲ. ಹೀಗಾಗಿ ರಸ್ತೆ ಬದಿ ತ್ಯಾಜ್ಯ ಸಮಸ್ಯೆಗೆ ಮುಕ್ತಿ ಹಾಡಲು ಮುಂದಾದ ಉಡುಪಿ ನಗರಸಭೆ ಆಡಳಿತ ತ್ಯಾಜ್ಯ ಹಾಕುವ ನಿರ್ದಿಷ್ಟ ಜಾಗದಲ್ಲಿ ಕೈತೋಟ ನಿರ್ಮಿಸಿ ಸ್ಪಷ್ಟ ಸಂದೇಶ ರವಾನಿಸಿದೆ.
ನಗರಸಭೆ ಸ್ಥಳೀಯ ಸಂಘ ಸಂಸ್ಥೆಗಳು ಮತ್ತು ಸಾಹಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಕೊಳ ವಾರ್ಡ್ ಬಲರಾಂ ನಗರದ ಮಲ್ಪೆ ಪೊಲೀಸ್ ಸ್ಟೇಷನ್ ಬಳಿ ತ್ಯಾಜ್ಯ ಬೀಳುವ ಜಾಗದಲ್ಲಿ ಸಾರ್ವಜನಿಕರು ತ್ಯಾಜ್ಯ ಹಾಕದಂತೆ ತಡೆಯುವ ಪ್ರಯತ್ನ ಮಾಡಿದೆ.

ತ್ಯಾಜ್ಯ ಎಸೆಯುವವರಿಗೆ ದಂಡ ವಿಧಿಸುತ್ತಿರುವುದರಿಂದ ಹೆಚ್ಚಿನ ಕಡೆ ರಸ್ತೆ ಬದಿಯಲ್ಲಿ ತ್ಯಾಜ್ಯ ಹಾಕುವುದು ನಿಯಂತ್ರಣಕ್ಕೆ ಬಂದಿದೆ. ಆದರೂ ಕೆಲವು ಕಡೆ ಇನ್ನೂ ಕೂಡಾ ತ್ಯಾಜ್ಯ ರಸ್ತೆ ಬದಿಯಲ್ಲಿ ಬೀಳುತ್ತಿದೆ. ಇದನ್ನು ಮನಗಂಡು ಸಾರ್ವಜನಿಕರ ಮನಸ್ಥಿತಿ ಬದಲಾವಣೆ ಮಾಡಲು ನಿರ್ಧರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net