

ವಿಜಯವಾಣಿ ಸುದ್ದಿಜಾಲ ಉಡುಪಿ
ಉಪ್ಪೂರು ಭಾಗದಲ್ಲಿ ನದಿ ಕೊರೆತ ತೀವ್ರಗೊಂಡಿದ್ದರಿಂದ ಹಲವಾರು ತೆಂಗಿನಮರಗಳು ಕೊಚ್ಚಿ ಹೋಗಿದ್ದು, ಕಾಂಕ್ರೀಟ್ನ ಸಂಪರ್ಕ ರಸ್ತೆಯೂ ಕಡಿತವಾಗುವ ಸಾಧ್ಯತೆ ಇದೆ. ನದಿ ಕೊರೆತ ಸಮಸ್ಯೆ ಇರುವಲ್ಲಿ ಶಾಶ್ವತ ತಡೆಗೋಡೆ ಕಾಮಗಾರಿ ಮಂಜೂರಾಗಿದ್ದು ಶೀಘ್ರ ಆರಂಭಿಸಿ ಎಂದು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳಿಗೆ ಶಾಸಕ ಯಶ್ಪಾಲ್ ಸುವರ್ಣ ಸೂಚಿಸಿದರು.
ಉಪ್ಪೂರು ಗ್ರಾಪಂ ಅಧ್ಯಕ್ಷೆ ಗಾಯತ್ರಿ, ಉಪಾಧ್ಯಕ್ಷ ಸತೀಶ ಪೂಜಾರಿ, ಸದಸ್ಯರಾದ ಅವಿನಾಶ ಶೆಟ್ಟಿ, ಮಹೇಶ ಕೋಟ್ಯಾನ್, ರಾಜೇಶ ರಾವ್, ನೇತ್ರಾವತಿ, ಪ್ರಶಾಂತ ಮಾಯಾಡಿ, ಗ್ರಾಮ ಲೆಕ್ಕಾಧಿಕಾರಿ ಪ್ರಮೋದ, ಪಿಡಿಒ ಅನುಪಮಾ, ಕರ್ನಾಟಕ ನೀರಾವರಿ ನಿಗಮದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಸುನೀಲ, ಸಹಾಯಕ ಅಭಿಯಂತ ಪ್ರೀತಮ್ ಇತರರಿದ್ದರು.