ಮಲ್ಪೆ ರಸ್ತೆ ಕಾಮಗಾರಿ ತಕ್ಷಣ ಆರಂಭಿಸಿ...

Yashpal
Published on

ಶಾಸಕ ಯಶ್​ಪಾಲ್​ ಸುವರ್ಣ ಸೂಚನೆ

ಹೆದ್ದಾರಿ ಅಧಿಕಾರಿಗಳೊಂದಿಗೆ ಸಭೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಕರಾವಳಿ ಜಂಕ್ಷನ್​ನಿಂದ ಆದಿಉಡುಪಿವರೆಗೆ ಕಟ್ಟಡಗಳನ್ನು ತೆರವು ಮಾಡಿ ರಸ್ತೆ ಕಾಮಗಾರಿ ನಡೆಸಲು ಈಗಾಗಲೇ ಅವಕಾಶ ಮಾಡಿಕೊಡಲಾಗಿದೆ. ತಕ್ಷಣ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಶಾಸಕ ಯಶ್​ಪಾಲ್​ ಸುವರ್ಣ ಸೂಚನೆ ನೀಡಿದರು.

ಮಲ್ಪೆ-ಆದಿಉಡುಪಿ ರಾಷ್ಟೀಯ ಹೆದ್ದಾರಿ ಕಾಮಗಾರಿ ಪ್ರಗತಿಯ ಕುರಿತಂತೆ ಕಂದಾಯ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಉಡುಪಿಯಲ್ಲಿ ಮೇ 15ರಂದು ಸಭೆ ನಡೆಸಿ ಮಾತನಾಡಿದರು.

ಶಾಲೆಯ ಆವರಣ ಗೋಡೆ ಮರು ನಿರ್ಮಿಸಿ

MLA Udupi
ಕಾಮಗಾರಿಗಾಗಿ ಭೂಸ್ವಾಧೀನ ಪ್ರಕ್ರಿಯೆಯ ವೇಳೆ ಸ್ಥಳ ನೀಡಿದ ಅನೇಕರಿಗೆ ಪರಿಹಾರ ಕೊಟ್ಟಿಲ್ಲ. ಕೂಡಲೇ ಬಾಕಿ ಇರುವವರಿಗೆ ಪರಿಹಾರ ನೀಡಬೇಕು. ರಸ್ತೆ ಅಗಲೀಕರಣಕ್ಕಾಗಿ ಈಗಾಗಲೇ ತೆರವುಗೊಳಿಸಿರುವ ಸರ್ಕಾರಿ ಶಾಲೆಯ ಆವರಣ ಗೋಡೆಯನ್ನು ಮರುನಿರ್ಮಿಸಿ ಕೊಡಬೇಕು. ಮಳೆಗಾಲದ ಸಂದರ್ಭದಲ್ಲಿ ಮೀನುಗಾರಿಕಾ ಚಟುವಟಿಕೆ ಹಾಗೂ ಪ್ರವಾಸಿಗರ ದಟ್ಟಣೆ ಕಡಿಮೆ ಇರಲಿದ್ದು, ಕಾಮಗಾರಿಗೆ ಇನ್ನಷ್ಟು ವೇಗ ನೀಡಬೇಕು ಎಂದರು.

ಸಭೆಯಲ್ಲಿ ಉಡುಪಿ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ತಹಸೀಲ್ದಾರ್​ ಗುರುರಾಜ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಅಭಿಯಂತ ಮಂಜುನಾಥ ನಾಯಕ, ನಗರಸಭಾ ಸದಸ್ಯರಾದ ಸುಮಿತ್ರಾ ನಾಯಕ, ಸುಂದರ ಕಲ್ಮಾಡಿ, ಶ್ರೀಶ ಕೊಡವೂರು, ಸವಿತಾ ಹರೀಶ ರಾಮ್​, ಎಡ್ಲಿನ್​ ಕರ್ಕಡ, ಮಲ್ಪೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net