ಎಲ್ಲ ವಾರ್ಡ್​ಗಳ ಅಭಿವೃದ್ಧಿಗೆ ವಿಶೇಷ ಮುತುವರ್ಜಿ

Yashpal
Published on

ಶಾಸಕ ಯಶ್​ಪಾಲ್​ ಸುವರ್ಣ ಭರವಸೆ

ವಿಜಯವಾಣಿ ಸುದ್ದಿಜಾಲ ಉಡುಪಿ

ವಡಭಾಂಡೇಶ್ವರ ವಾರ್ಡ್​ನ ಸರಸ್ವತಿ ಭಜನಾ ಮಂದಿರ ಬಳಿ 82 ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಭವನ ಹಾಗೂ 50 ಲಕ್ಷ ರೂ. ವೆಚ್ಚದಲ್ಲಿ ಬೈಲಕೆರೆ-ಉದ್ದಿನಹಿತ್ಲು ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಲಿದೆ. ವಡಭಾಂಡೇಶ್ವರ ವಾರ್ಡ್​ ಸೇರಿದಂತೆ ಕ್ಷೇತ್ರದ ಎಲ್ಲ ವಾರ್ಡ್​ಗಳ ಅಭಿವೃದ್ಧಿಗೆ ವಿಶೇಷ ಮುತುವರ್ಜಿ ವಹಿಸುವುದಾಗಿ ಶಾಸಕ ಯಶ್​ಪಾಲ್​ ಸುವರ್ಣ ಭರವಸೆ ನೀಡಿದರು.

ಉಡುಪಿ ನಗರಸಭೆಯ ವಡಭಾಂಡೇಶ್ವರ ವಾರ್ಡ್​ನಲ್ಲಿ 1.32 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಗುರುವಾರ (ಅ.9) ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಉಡುಪಿ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಸಭಾ ಸದಸ್ಯರಾದ ಯೋಗೀಶ ಸಾಲ್ಯಾನ್​, ಸುಂದರ ಕಲ್ಮಾಡಿ, ರಮೇಶ ಕಾಂಚನ್​, ಮಾಜಿ ಸದಸ್ಯ ವಿಜಯ ಕುಂದರ್​, ಸ್ಥಳೀಯ ಮುಖಂಡರಾದ ಪ್ರದೀಪ, ಗಿರೀಶ, ಅಜಿತ್​ ಕೊಡವೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net