ಮಟಪಾಡಿಯ 'ಅನ್ನಪೂರ್ಣೆ' ಗುಲಾಬಿಯಮ್ಮ ನಿಧನ

Gulabi
Published on

ವಿಜಯವಾಣಿ ಸುದ್ದಿಜಾಲ ಉಡುಪಿ

ಕೀರ್ತಿಶೇಷ ಮಟಪಾಡಿಯ ಕೃಷ್ಣಯ್ಯ ಗಾಣಿಗ ಅವರ ಪತ್ನಿ ಗುಲಾಬಿ ಗಾಣಿಗ (90) ಸೋಮವಾರ (ಸೆ.29) ನಿಧನರಾದರು. ಪ್ರಗತಿಪರ ಕೃಷಿಕರಾಗಿದ್ದ ಅವರು, ಪಾಡ್ದನ ಮತ್ತು ಶೋಬಾನೆ ಹಾಡು ಹೇಳುವುದರಲ್ಲಿ ನೈಪುಣ್ಯತೆ ಹೊಂದಿದ್ದರು.

ಪಾಕತಜ್ಞೆಯೂ ಆಗಿದ್ದ ಅವರು, ಅನ್ನಪೂರ್ಣೆ ಎಂದೇ ಹೆಸರು ಗಳಿಸಿದ್ದರು. ಮಕ್ಕಳಿಂದ ಹಿರಿಯರತನಕ ಎಲ್ಲರೂ ಪ್ರೀತಿಯಿಂದ ಗುಲಾಬಿಯಮ್ಮ ಎಂದೇ ಮಾತನಾಡಿಸುತ್ತಿದ್ದರು.

ಗುಲಾಬಿ ಗಾಣಿಗ ಅವರ ಅಂತ್ಯಸಂಸ್ಕಾರ ಮಂಗಳವಾರ (ಸೆ.30) ಬೆಳಗ್ಗೆ 9 ಗಂಟೆಗೆ ಮಟಪಾಡಿಯಲ್ಲಿ ನೆರವೇರಲಿದೆ.

ಮೃತರು ಮೂವರು ಪುತ್ರಿಯರು ಹಾಗೂ ಮೂವರು ಪುತ್ರರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net