ಫಿಟ್ ರಹೋ, ಉಡುಪಿಯಲ್ಲಿ 75 ಕೀ.ಮೀ ಮ್ಯಾರಥಾನ್ ಓಟ !

IMG-20210906-WA0015
Published on

ನೇಶನ್‌ಫಸ್ಟ್ ತಂಡದ ವತಿಯಿಂದ ಫಿಟ್‌ರಹೋ ಉಡುಪಿ ಧ್ಯೇಯವಾಕ್ಯದೊಂದಿಗೆ 75 ಕೀ.ಮೀ ಮ್ಯಾರಥಾನ್ ಓಟ ಯಶಸ್ವಿಯಾಗಿ ಜರಗಿತು. ಮ್ಯಾರಥಾನ್ ಓಟಕ್ಕೆ ಮುಂಜಾನೆ 7:45ಕ್ಕೆ ಉಡುಪಿ ಕ್ಲಾಕ್ ಟವರ್ ಬಳಿ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಚರ್ಚ್‌ನ ಧರ್ಮಗುರು ಚಾರ್ಲ್ಸ್ ಮಿನೇಜಸ್, ಶಾಸಕ ಕೆ.ರಘುಪತಿ ಭಟ್ ಚಾಲನೆ ನೀಡಿದರು. ಮ್ಯಾರಥಾನ್ ಓಟ ದೊಡ್ಡಣಗುಡ್ಡೆ ತಲುಪಿದಾಗ, ಸ್ಥಳೀಯ ಮಸೀದಿ ಧರ್ಮಗುರು ನಜೀರ್ ಅಹಮ್ಮದ್ ಆಶೀರ್ವಚಿಸಿ, ಹಸಿರು ನಿಶಾನೆ ತೋರಿಸಿದರು. ತಂಡವು ಬೆಳಗ್ಗೆ 10 ಕ್ಕೆ ಮಣಿಪಾಲ ತಲುಪಿದ್ದು, ಮಾಹೆ ಕುಲಪತಿ ಎಂ.ಡಿ. ವೆಂಕಟೇಶ್, ಸಹ ಕುಲಾಧಿಪತಿಗಳಾದ ಎಚ್, ಎಸ್. ಬಲ್ಲಾಳ್ ಹಸಿರು ನಿಶಾನೆ ತೋರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net