ಉಡುಪಿ ಕೃಷ್ಣ ಮಠದಲ್ಲಿ ಜನಜಾತ್ರೆ

udp-25-mutt
Published on

ಉಡುಪಿ: ವಾರಾಂತ್ಯ ರಜೆಯ ಹಿನ್ನೆಲೆಯಲ್ಲಿ ಕಳೆದ 3 ದಿನಗಳಿಂದ ಕೃಷ್ಣ ಮಠಕ್ಕೆ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದಾರೆ. ಕೃಷ್ಣನ ದರ್ಶನಕ್ಕೆ ಸಾಗುವ ಮಾರ್ಗದಲ್ಲಿ ಉದ್ದನೆಯ ಸರತಿ ಸಾಲು ಇತ್ತು. ದೇಗುಲದ ರಥಬೀದಿ ಭಕ್ತರಿಂದ ತುಂಬಿಹೋಗಿತ್ತು.

ಸುತ್ತಮುತ್ತಲಿನ ಅಂಗಡಿಗಳಲ್ಲಿ ಪ್ರವಾಸಿಗರಿಂದ ಖರೀದಿ ಭರಾಟೆಯೂ ಜೋರಿತ್ತು. ಡಿಸೆಂಬರ್​ ತಿಂಗಳ ಅಂತ್ಯದಲ್ಲಿ ರಾಜ್ಯದ ಶಾಲಾ ಮಕ್ಕಳ ಪ್ರವಾಸವೂ ಇರುವುದರಿಂದ ಕೃಷ್ಣ ಮಠದಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕಂಡುಬಂದರು. ಕನಕನ ಕಿಂಡಿ ಹಾಗೂ ಕನಕಗೋಪುರ ವೀಕ್ಷಣೆಗೆ ಜನರು ಮುಗಿಬಿದ್ದಿದ್ದರು. ಮಠದ ಪಾರ್ಕಿಂಗ್​ ಸ್ಥಳವು ಪ್ರವಾಸಿಗರ ವಾಹನದಿಂದ ಭರ್ತಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net