ಆ. 1ರಿಂದ ಕೃಷ್ಣ ಮಠದಲ್ಲಿ ಶ್ರೀಕೃಷ್ಣ ಮಾಸೋತ್ಸವ

AKB_8902
Published on

ಉಡುಪಿ: ಕೃಷ್ಣ ಮಠದಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಈ ಬಾರಿ ವೈಭವ ಪೂರ್ಣವಾಗಿ ಆಚರಿಸಲು ಉದ್ದೇಶಿಸಲಾಗಿದ್ದು, ಆಗಸ್ಟ್​ 1ರಿಂದ ಸೆ. 1ರವರೆಗೆ ಒಂದು ತಿಂಗಳ ಪರ್ಯಂತ ಶ್ರೀಕೃಷ್ಣ ಮಾಸೋತ್ಸವ, ಕೃಷ್ಣಜನ್ಮಾಷ್ಟಮಿ - ಶ್ರೀಕೃಷ್ಣ್ಣ ಲೀಲೋತ್ಸವ, ಲಡ್ಡೋತ್ಸವ, ಸಾಮೂಹಿಕ ಡೋಲೋತ್ಸವ ನಡೆಯಲಿದೆ ಎಂದು ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಕೃಷ್ಣ ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ವಿಶೇಷವಾಗಿ ಲಡ್ಡೋತ್ಸವದಲ್ಲಿ 108 ಬಗೆಯ ಲಡ್ಡುಗಳನ್ನು ತಯಾರಿಸಿ ಭಕ್ತರಿಗೆ ವಿತರಿಸಲಾಗುವುದು. ಜನ್ಮಾಷ್ಟಮಿಗೆ ಅನೇಕ ಬಗೆಯ ಲಡ್ಡು, ಚಕ್ಕುಲಿ ಮಾಡುವುದು ಸಂಪ್ರದಾಯ. ಕಾಲಕ್ರಮೇಣ ಈ ಸಂಪ್ರದಾಯ ಣಿಸಿದೆ. ಈ ವೈಭವವನ್ನು ಮತ್ತೆ ಮರುಕಳಿಸುವ ನಿಟ್ಟಿನಲ್ಲಿ ಹಳೆ ಕಾಲದ ವಿವಿಧ ಬಗೆಯ ಲಡ್ಡುಗಳನ್ನು ಕೃಷ್ಣಿಗೆ ಸರ್ಪಣೆ ಮಾಡಲಾಗುವುದು. ಲಡ್ಡು ತಯಾರಿಸುವ ವಿಧಾನವನ್ನು ಭಕ್ತರಿಗೆ ತಿಳಿಸಲಾಗುವುದು ಎಂದರು.

ಆ.1ರಂದು ಮಾಸೋತ್ಸವದ ಉದ್ಘಾಟನೆ ನಡೆಯಲಿದೆ. 22ರಂದು ಲಡ್ಡೋತ್ಸವ ಆಯೋಜಿಸಲಾಗಿದೆ. 26ರಂದು ಜನ್ಮಾಷ್ಟಮಿ ದಿನ ಸಾಮೂಹಿಕ ತೊಟ್ಟಿಲು ಸೇವೆ, ಮುದ್ದುಕೃಷ್ಣ ಸ್ಪರ್ಧೆ, ಸಾಂಸತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ರಾತ್ರಿ 12.08ಕ್ಕೆ ಅ್ಯರ್ಪ್ರದಾನ ನಡೆಯಲಿದೆ. 27ರಂದು 3ಗಂಟೆಗೆ ಶ್ರೀಕೃಷ್ಣ ಲೀಲೋತ್ಸವ, ರಥೋತ್ಸವ, ಹುಲಿವೇಷ ಕುಣಿತ ನಡೆಯಲಿದೆ. 28ರಂದು ವಿವಿಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುತ್ತದೆ. ಹೀಗೆ ಕೃಷ್ಣನ ಸನ್ನಿಧಿಯಲ್ಲಿ ಶ್ರೀಕೃಷ್ಣ ಜಯಂತ್ಯುತ್ಸವವನ್ನು ಶ್ರೀಕೃಷ್ಣಮಾಸೋತ್ಸವವನ್ನಾಗಿ ಒಂದು ತಿಂಗಳ ಕಾಲ ವೈಭವದಿಂದ ನಡೆಸಲು ಸಂಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು. ಮಠದ ದಿವಾನ್​ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ರಮೇಶ್​ ಭಟ್​ ಮೊದಲಾದವರು ಉಪಸ್ಥಿತರಿದ್ದರು.

ಉದ್ಘಾಟನೆ
ಆ. 1ರಂದು ಸಂಜೆ 5 ಗಂಟೆಗೆ ಮಾಸೋತ್ಸವವನ್ನು ರಾಜ್ಯ ಗೃಹ ಸಚಿವ ಡಾ ಜಿ ಪರಮೇಶ್ವರ್​ ಉದ್ಘಾಟಿಸಲಿದ್ದಾರೆ. ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು, ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಭಂಡಾರಕೇರಿ ಮಠ ಶ್ರೀ ವಿದ್ವೇಶ ತೀರ್ಥ ಶ್ರೀಪಾದರು, ಶ್ರೀ ಸುಶ್ರೀಂದ್ರ ತೀರ್ಥಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸಂಸದ ಕೋಟ ಶ್ರೀನಿವಾಸ್​ ಪೂಜಾರಿ, ಶಾಸಕ ಯಶಪಾಲ್​ ಸುವರ್ಣ, ಸುರೇಶ್​ ಶೆಟ್ಟಿ ಗುರ್ಮೆ, ಮಾಜಿ ಶಾಸಕ ರಘುಪತಿ ಭಟ್​, ಉದ್ಯಮಿಗಳಾದ ನಾಡೋಜ ಜಿ ಶಂಕರ್​, ಪ್ರಸಾದ್​ ರಾಜ್​ ಕಂಚನ್​, ಮಾಹೆ ಸಹ ಕುಲಾಧಿಪತಿ ಎಚ್​. ಎಸ್​. ಬಳ್ಳಾಲ್​,ಪ್ರೊ. ರಾಧಾಕೃಫ್ಣಿ, ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಪರ್ಯಾಯ ಶ್ರೀಗಳಾದ ಸುಗುಣೇಂದ್ರ ತೀರ್ಥ ಶ್ರೀಪಾದರಿಂದ ಅನ್ಸೆನ್​ ಸ್ಪರ್ಧೆಗಳ ಉದ್ಘಾಟನೆ ನಡೆಯಲಿದೆ. ಕಾರ್ಯಕ್ರಮಕ್ಕೂ ಮುನ್ನ ಸಂಜೆ ನಾಲ್ಕು ಗಂಟೆಯಿಂದ ರಾಜಾಂಗಣದೆಡೆಗೆ ಶೋಭಾಯಾತ್ರೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net