ಯಶೋ ಮಾಧ್ಯಮ ಪ್ರಶಸ್ತಿಗೆ ಕಿರಣ ಮಂಜನಬೈಲು ಆಯ್ಕೆ

Kiran Manjanbailu
Published on

ಉಡುಪಿ: ಪತ್ರಕರ್ತರ ಸಾಧನೆ ಗುರುತಿಸಿ ಬೆಂಗಳೂರಿನ ಸ್ಪಂದನಾ ಸೇವಾ ಸಂಸ್ಥೆಯ ವತಿಯಿಂದ ಕೊಡಲ್ಪಡುವ ಯಶೋ ಮಾಧ್ಯಮ-2025'ರ ಪ್ರಶಸ್ತಿಗೆ ಸಂಯುಕ್ತ ಕರ್ನಾಟಕ ಪತ್ರಿಕೆಯ ಉಡುಪಿ ಜಿಲ್ಲಾ ವರದಿಗಾರ ಕಿರಣ ಮಂಜನಬೈಲು ಆಯ್ಕೆಯಾಗಿದ್ದಾರೆ.

ಜೂ.14ರಂದು ಬೆಳಗ್ಗೆ 10 ಗಂಟೆಗೆ ಕಲ್ಯಾಣಪುರದ ಹಿಂದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿರುವ ವಿದ್ಯಾರ್ಥಿಗಳಿಗೆ ನೋಟ್​ ಬುಕ್​ ವಿತರಣಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಕರ್ನಾಟಕ ರಾಜ್ಯ ಕ್ರಷರ್​ ಮತ್ತು ಕ್ವಾರಿ ಮಾಲೀಕರ ಸಂಘಗಳ ಒಕ್ಕೂಟ (ರಿ.)ದ ಅಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಪ್ರಮೋದ ಮಧ್ವರಾಜ್​ ಅಧ್ಯಕ್ಷತೆ ವಹಿಸಲಿದ್ದಾರೆ. ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಅನಂತಪದ್ಮನಾಭ ಕಿಣಿ, ಸ್ಕೌಟ್ಸ್​ ಆ್ಯಂಡ್​ ಗೈಡ್ಸ್​ ಉಡುಪಿ ಜಿಲ್ಲಾ ಸಂಸ್ಥೆಯ ಸ್ಕೌಟ್ಸ್​ ಆಯುಕ್ತ ಜನಾರ್ದನ ಕೊಡವೂರು, ಹಫೀಜ್​, ಯು.ಲೋಕೇಶ ಪೂಜಾರಿ, ಸುಬ್ರಹ್ಮಣ್ಯ ಕಾರಂತ, ಡಾ.ಮರಿಯಾ ಪಯಸ್, ಸಂತೋಷ ಕಾಮತ, ರಜನಿ ವಿ. ಪೈ ಇತರರು ಪಾಲ್ಗೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net